ತುಮಕೂರು

ಗೋಮಾಳ ಪರಭಾರೆಯಾದರೆ ಪರಿಣಾಮ ನೆಟ್ಟಗಿರಲ್ಲ: ಜೆಸಿಎಂ

Published On :

ಚಿಕ್ಕನಾಯಕನಹಳ್ಳಿ: ಹಲವಾರು ವರ್ಷಗಳಿಂದ ಅನುಭವಿಸಿಕೊಂಡು ಬಂದಿರುವ ರೈತರ ಗೋಮಾಳದ ಜಮೀನಿನ ತಂಟೆಗೆ ಬರುವುದು ಸರಿಯಲ್ಲ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಇತ್ತೀಚೆಗೆ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತುಮಕೂರಿನಲ್ಲಿ 'ಖಾಸಗಿ ಕೈಗಾರಿಕೊದ್ಯಮಿಗಳ ಸಭೆಯಲ್ಲಿ ಜಿಲ್ಲೆಯಲ್ಲಿ 11 ಸಾವಿರ ಎಕರೆ ಸರ್ಕಾರಿ ಗೋಮಾಳ ಜಮೀನಿದೆ. ಗೋಮಾಳ ಜಮೀನು ವಿಲೇವಾರಿ ತಡೆ ಕಾನೂನಿಗೆ ತಿದ್ದುಪಡಿ ತಂದು, ನಿಮಗೆ ಜಮೀನು ನೀಡುವ ಮೂಲಕ ಚುನಾವಣೆಯಲ್ಲಿ ಮಾಡಿರುವ ಸಹಾಯದ ಋಣ ತೀರಿಸುತ್ತೇನೆ' ಎಂಬ ಹೇಳಿಕೆಗೆ ಮೇಲಿನಂತೆ ಎಚ್ಚರಿಕೆ ನೀಡಿದರು.
ಇದೇ ಜಿಲ್ಲೆಯಲ್ಲಿ ಹುಟ್ಟಿ, ಜಿಲ್ಲಾ ಉಸ್ತುವಾರಿ ಸಚಿವರು ಸಹ ಆಗಿರುವ ನಿಮಗೆ ಜಿಲ್ಲೆಯ ರೈತರ ಕಷ್ಟದ ಅರಿವಿರಬೇಕಿತ್ತು. 30-40 ವರ್ಷಗಳಿಂದ ಸ್ವಾಧೀನದಲ್ಲಿರುವ ರೈತರು ಈಗಾಗಲೇ ಸದರಿ ಜಮೀನುಗಳಲ್ಲಿ ಅಡಕೆ, ತೆಂಗು ಮುಂತಾದ ದೀರ್ಘಕಾಲದ ಬೆಳೆಗಳನ್ನು ಬೆಳೆದಿದ್ದು, ರೈತರಿಗೆ ಭೂ ಮಂಜೂರಾತಿ ಸಮಿತಿ ರಚಿಸುವ ಮೂಲಕ ಸ್ವಾಧೀನದಲ್ಲಿರುವ ಜಮೀನುಗಳನ್ನು ರೈತರ ಹೆಸರಿಗೆ ಮಾಡುವುದನ್ನು ಬಿಟ್ಟು, ರೈತರನ್ನು ವಕ್ಕಲೆಬ್ಬಿಸುವ ಬಗ್ಗೆ ಮಾತನಾಡಲು ನಿಮಗೆ ನಾಚಿಕೆಯಾಗಬೇಕು. ಚುನಾವಣೆಯಲ್ಲಿ ಹಣನೀಡಿ ಸಹಕರಿಸಿರುವ ನಿಮಗೆ ಕಾನೂನು ತಿದ್ದುಪಡಿ ಮೂಲಕ ಸಹಾಯ ಮಾಡುತ್ತೇನೆ ಎಂದು ಬಹುಶಃ ದೇಶದಲ್ಲಿ ಯಾವ ರಾಜಕಾರಣಿಯೂ ಹೇಳಿಲ್ಲ.2013 ಭೂಸ್ವಾಧೀನ ಕಾಯ್ದೆ ತಿದ್ದುಪಡಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಸ್ವಾಧೀನದಲ್ಲಿರುವ ರೈತನ ಜಮೀನನ್ನು ಸಾರ್ವಜನಿಕ ಉಪಯೋಗಕ್ಕೆ ವಶಪಡಿಸಿಕೊಳ್ಳುವಾಗ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.