ಬಸವಣ್ಣ ಶಿಲಾಪ್ರತಿಷ್ಠಾಪನೆ 19ಕ್ಕೆ
ಹುಳಿಯಾರು: ಹೋಬಳಿ ಯಳನಡು ಗ್ರಾಮದಲ್ಲಿ ಬಸವಶಿವಯೋಗಿ ಸಿದ್ಧರಾಮೇಶ್ವರ ಸಂಘ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಮೇ 19ರ ಸೋಮವಾರ ನೂತನ ಬಸವ ಮಂಟಪ ಹಾಗೂ ಬಸವಣ್ಣನವರ ಅಮೃತಶಿಲಾಮೂರ್ತಿಯ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ.ಬೆಂಗಳೂರಿನ ಬಸವ ಮಂಟಪದ ಜಗದ್ಗುರು ಬಸವಕುಮಾರ ಸ್ವಾಮೀಜಿಯವರು ಬಸವಣ್ಣನವರ ಅಮೃತಶಿಲಾಮೂರ್ತಿಯ ಪ್ರತಿಷ್ಠಾಪನೆ ಮಾಡಲಿದ್ದು, ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷ ಶ್ರೀಮನ್ ನಿರಂಜನ ಮಹಾಜಗದ್ಗುರು, ಮಾತೆ ಮಹಾದೇವಿ ಸಾನಿಧ್ಯವಹಿಸುವರು. ಹೊಸದುರ್ಗ ಶಾಖಾಮಠದ ಈಶ್ವರಾನಂದ ಪುರಿಸ್ವಾಮಿ ಧ್ವಜಾರೋಹಣವನ್ನು ನೆರವೇರಿಸಲಿದ್ದು, ಯಳನಡು ಅರಸೀಕೆರೆ ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮದೇಶೀಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ಉದ್ಘಾಟಿಸಲಿದ್ದಾರೆ. ಗುಲ್ಬರ್ಗದ ಜೀವರಗಿ ಮರುಳ ಶಂಕರಪೀಠದ ಸಿದ್ಧಬಸವ ಕಬೀರಾನಂದ ಸ್ವಾಮೀಜಿಯವರಿಂದ ಪ್ರಾಸ್ತಾವಿಕ ನುಡಿ, ಬೆಳಗಾವಿ ನಿಜಗುಣಾನಂದ ಸ್ವಾಮೀಜಿಯವರಿಂದ ಉಪನ್ಯಾಸ, ಬೆಂಗಳೂರಿನ ನಿಸರ್ಗ, ಚೈತ್ರ ಹಾಗೂ ತುರುವೇಕೆರೆ ಸಂತೋಷಕುಮಾರ ಅವರಿಂದ ನೃತ್ಯರೂಪಕ ಕಾರ್ಯಕ್ರಮ್ರವಿದ್ದು ಸಣ್ಣನಂಜಪ್ಪ, ಡಾ. ಸೋಮಶೇಖರ್, ಬಿ. ಗುರುಪ್ರಸಾದ್, ಮೈಸೂರಪ್ಪ, ವೈ.ಆರ್. ಮಲ್ಲಿಕಾರ್ಜುನಯ್ಯ, ಬಸವರಾಜು, ಸೋಮಶೇಖರಯ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಎಚ್.ವಿ.ಪೂಜಾ
ಶೇ.97.33 ಅಂಕ
ಹುಳಿಯಾರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹುಳಿಯಾರು ಹೋಬಳಿ ಹೊಸಳ್ಳಿಪಾಳ್ಯದ ವಸಂತ್ಕುಮಾರ್ ಅವರ ಪುತ್ರಿ ಎಚ್.ವಿ.ಪೂಜಾ ಶೇ.97.33 ಪಡೆದು ತೇರ್ಗಡೆಯಾಗಿದ್ದಾಳೆ.ಗ್ರಾಮೀಣ ಪ್ರದೇಶದ ಈಕೆ ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತಿರುವ ಪೂಜಾ ಮೂಡಬಿದರೆ ಆಳ್ವಾಸ್ ಪಿಯು ಕಾಲೇಜಿನಲ್ಲಿ ಕನ್ನಡ 98 , ಇಂಗ್ಲಿಷ್ 95, ಭೌತಶಾಸ್ತ್ರ 95 , ರಸಾಯನಶಾಸ್ತ್ರ 99, ಗಣಿತ 100, ಜೀವಶಾಸ್ತ್ರದಲ್ಲಿ 97 ಅಂಕಗಳಿಸುವ ಮೂಲಕ ಕಾಲೇಜು ಹಾಗೂ ಪೋಷಕರಿಗೆ ಕೀರ್ತಿ ತಂದಿರುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

