ತುಮಕೂರು

ಸಭಾಂಗಣ ಉದ್ಘಾಟನೆಗೇಕೆ ಆಹ್ವಾನಿಸಿಲ್ಲ?

Published On :

ಶಿರಾ: ಈಗಿರುವ ನಗರಸಭೆ ಕಾರ್ಯಾಲಯದ ಮೇಲೆ ಕಟ್ಟಿರುವ ನೂತನ ಸಭಾಂಗಣದ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಿಲ್ಲವೆಂದು ಅನೇಕ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು.
ನಗರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ, ಅಧ್ಯಕ್ಷೆ ಜ್ಞಾನಪೂರ್ಣಮ್ಮ ಹಾಗೂ ಪ್ರಭಾರ ಆಯುಕ್ತರಿಗೂ  ಸದಸ್ಯ ಆರ್.ಉಗ್ರೇಶ್ ಸೇರಿದಂತೆ ಪಕ್ಷಭೇದ ಮರೆತು ಹಲವು ಸದಸ್ಯರು ಸಭೆಯಲ್ಲಿ ಕಿಡಿ ಕಾರಿದ ಪ್ರಸಂಗ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಯಾವುದೇ ಆಹ್ವಾನ ಪತ್ರಿಕೆಯನ್ನು ಸದಸ್ಯರುಗಳಿಗೆ ನೀಡದೇ ತರಾತುರಿಯಲ್ಲಿ ನಗರಸಭೆಯ ನೂತನ ಸಭಾಂಗಣದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ ಜಯಚಂದ್ರ ಉದ್ಘಾಟಿಸಿ ಕಾರ್ಯನಿಮಿತ್ತ ಸ್ಥಳದಿಂದ ತೆರಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ನಗರಸಭೆಯ ನೂತನ ಸಭಾಂಗಣದ ಉದ್ಘಾಟನೆಗೆ ಬಂದು ಮೊದಲ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ನಗರದ ಸಮಸ್ಯೆಗಳನ್ನು ಈಡೇರಿಸುತ್ತಾರೆ ಎಂದು ಕಾದಿದ್ದ ನಗರಸಭೆ ಸದಸ್ಯರು ಅವರ ಗೈರು ಹಾಜರಿಯಿಂದ ಬೇಸತ್ತು ಕೋಪಾವೇಶ ವ್ಯಕ್ತಪಡಿಸಿದರು.  ನೂತನ ಸಭಾಂಗಣದ ಉದ್ಘಾಟನೆಗೆ ಕೇವಲ ಪ್ರಭಾವಿ ನಾಯಕರನ್ನು ಮಾತ್ರ ಆಹ್ವಾನಿಸಿದ್ದೀರಿ ಎಂದು ಸದಸ್ಯರಾದ ಸರಿತಾ ರವಿ, ಅನ್ನಪೂರ್ಣ ರಂಗನಾಥ್ ಅವರು ವಿರೋಧ ವ್ಯಕ್ತಪಡಿಸಿದರು. ಚುನಾವಣೆ ಸಮೀಪಕ್ಕೆ ಬಂದಾಗಲೇ ಆಶ್ರಯ ಯೋಜನೆಯ ಪಟ್ಟಿ ತಯಾರಿಸುವ ನೀವು   ವರ್ಷಗಳಿಂದಲೂ ನಗರಸಭೆಯಿಂದ ಒಂದು ಹಕ್ಕು ಪತ್ರವನ್ನೂ ಜನರಿಗೆ ಕೊಟ್ಟಿಲ್ಲ ಏಕೆ ಎಂದು ಸದಸ್ಯ ಆರ್.ಉಗ್ರೇಶ್ ಸಭೆಯಲ್ಲಿ ಪ್ರಶ್ನಿಸಿದರು.
ಅರ್ಹರಿಗೆ ಹಕ್ಕುಪತ್ರ: ಆಶ್ರಯ ಯೋಜನೆ ಹಕ್ಕು ಪತ್ರ ನೀಡಿಕೆ ಬಗ್ಗೆ ಪ್ರಶ್ನಿಸಿದ ಸದಸ್ಯರಿಗೆ ಉತ್ತರಿಸಿದ ಅಧ್ಯಕ್ಷೆ  ಜ್ಞಾನಪೂರ್ಣಮ್ಮ ಮಾತನಾಡಿ ಈ ಕೂಡಲೇ ಜಿಲ್ಲಾ ಸಚಿವರೊಡನೆ ಮಾತನಾಡಿ ಮುಂದಿನ ಸಭೆಯೊಳಗೆ ಅರ್ಹರಿಗೆ ಹಕ್ಕು ಪತ್ರ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಆರೋಪ: ವಾಜಪೇಯಿ ವಸತಿ ಯೋಜನೆಯಡಿಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಬೇಕಾದ ಅನುದಾನವನ್ನು  ಸಮರ್ಪಕವಾಗಿ ನೀಡದೇ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸತಾಯಿಸುತ್ತಿದ್ದು, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರಾದ ಆರ್. ಉಗ್ರೇಶ್, ಅಹಮದಿ, ಮಂಜು ನಾಥ್, ಪ್ರಕಾಶ್, ಮುದ್ದುರಾಜ್, ಅನ್ನಪೂರ್ಣ ಆರೋಪಿಸಿದರು.
ಸದಸ್ಯರ ಆರೋಪಕ್ಕೆ ಉತ್ತರಿಸಿ ಪ್ರಭಾರ ಆಯುಕ್ತ ಮಂಜು ನಾಥ್ ಸದಸ್ಯರ ಸಲಹೆಯಂತೆ ವಾಜಪೇಯಿ ವಸತಿ ಯೋಜನೆಯ ಮನೆಗಳ ನಿರ್ಮಾಣ, ಅನುದಾನ ನೀಡಿಕೆ ಬಗ್ಗೆ ಸ್ಥಳ ತನಿಖೆ ಮಾಡಲು ಕೆಲ ಸದಸ್ಯರ ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.