ತುಮಕೂರು

ಬೋರ್‌ವೆಲ್‌ಗಾಗಿ ಕೋಟಿ ಪ್ರಸ್ತಾವನೆ

Published On :

ಕನ್ನಡಪ್ರಭ ವಾರ್ತೆ, ತುಮಕೂರು, ಮೇ 23
ಜಿಲ್ಲೆಯಲ್ಲಿ 453 ಗ್ರಾಮಗಳಲ್ಲಿ ಬೋರ್‌ವೆಲ್ ಕೊರೆಯಲು 627.48 ಲಕ್ಷ ರು. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಈ ಪೈಕಿ 400 ಲಕ್ಷಗಳ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ.
ಕುಡಿಯುವ ನೀರಿಗೆ 800 ಲಕ್ಷ ರು. ಅನುದಾನದ ಅವಶ್ಯಕತೆ ಇರುತ್ತದೆ. ತುಮಕೂರು ಜಿಲ್ಲೆಯಲ್ಲಿ ಒಟ್ಟು 1400 ಬರಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದ್ದು, 53.4 ಲಕ್ಷ ರು. ವೆಚ್ಚದಲ್ಲಿ 69 ಹಳ್ಳಿಗಳಿಗೆ ಟ್ಯಾಂಕರ್ ಗಳ ಮೂಲಕ ನೀರನ್ನು ಸರಬರಾಜು ಮಾಡುತ್ತಿದ್ದು, 397.31 ಲಕ್ಷ ರು. ವೆಚ್ಚದಲ್ಲಿ 358 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.
1718.43 ಲಕ್ಷ ರು. ವೆಚ್ಚದಲ್ಲಿ 1336 ಪೈಪುಗಳ ವಿಸ್ತರಣೆ ಮಾಡಲಾಗಿದೆ.  1044.20 ಲಕ್ಷ ವೆಚ್ಚದಲ್ಲಿ 908  ಘಟಕಗಳನ್ನು ವಿದ್ಯುದ್ದೀಕರಣ ಮಾಡಲಾಗಿದೆ.  49.97 ಲಕ್ಷ ವೆಚ್ಚದಲ್ಲಿ 16940 ಜಾನುವಾರುಗಳಿಗೆ ಮೇವು ಲಭ್ಯತೆ ಒದಗಿಸಲಾಗಿದೆ.
894.83 ಲಕ್ಷ ರು. ವೆಚ್ಚದಲ್ಲಿ ಜಿ.ಪಂ. ಟಾಸ್ಕ್ ಪೋರ್ಸ್ ಯೋಜನೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.  274.10 ಲಕ್ಷ ರು. ಗಳ 224 ಬೆಸ್ಕಾಂ ವಿದ್ಯುದ್ದೀಕರಣ ಬಾಕಿ ಕೆಲಸಗಳು ನೆರವೇರಬೇಕಾಗಿದೆ.  ಸರ್ಕಾರದ ಅನುಮೋದನೆಗೆ 5 ಪ್ರಕರಣಗಳು ಬಾಕಿ ಇವೆ.
ತುರುವೇಕೆರೆ ತಾಲೂಕಿನಲ್ಲಿ 112 ಬರಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದ್ದು, 21 ಹಳ್ಳಿಗಳಿಗೆ 4.31 ಲಕ್ಷ ರು. ವೆಚ್ಚದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಿದೆ. ಮತ್ತು 31.30 ಲಕ್ಷ ರು. ವೆಚ್ಚದಲ್ಲಿ 27 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, 22.89 ಲಕ್ಷ ರು. ವೆಚ್ಚದಲ್ಲಿ 115 ಪೈಪುಗಳ ವಿಸ್ತರಣೆ ಮಾಡಲಾಗಿದ್ದು, 48 ಬೋರ್‌ವೆಲ್‌ಗಳ ವಿದ್ಯುದ್ದೀಕರಣ ಮಾಡಲಾಗಿದ್ದು,  9 ಘಟಕಗಳು ವಿದ್ಯುದ್ದೀಕರಣಕ್ಕೆ ಬಾಕಿ ಇದೆ.
ಗುಬ್ಬಿ ತಾಲೂಕಿನಲ್ಲಿ 224 ಬರಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದ್ದು, 15 ಹಳ್ಳಿಗಳಿಗೆ 4.62 ಲಕ್ಷ ರು. ವೆಚ್ಚದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಿದೆ ಮತ್ತು 77.11 ಲಕ್ಷ ರು. ವೆಚ್ಚದಲ್ಲಿ 36 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, 418.93 ಲಕ್ಷ ರು. ವೆಚ್ಚದಲ್ಲಿ 179 ಪೈಪುಗಳ ವಿಸ್ತರಣೆ ಮಾಡಲಾಗಿದ್ದು, 100 ಬೋರ್‌ವೆಲ್‌ಗಳ ವಿದ್ಯುದ್ದೀಕರಣ ಮಾಡಲಾಗಿದ್ದು,  18 ಘಟಕಗಳು ವಿದ್ಯುದ್ದೀಕರಣಕ್ಕೆ ಬಾಕಿ ಇದೆ.
ಕುಣಿಗಲ್ ತಾಲೂಕಿನಲ್ಲಿ 156 ಬರಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದ್ದು, 9 ಹಳ್ಳಿಗಳಿಗೆ 8.42 ಲಕ್ಷ ರು. ವೆಚ್ಚದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಿದೆ ಮತ್ತು 95.80 ಲಕ್ಷ ರೂ. ವೆಚ್ಚದಲ್ಲಿ 67 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, 290.90 ಲಕ್ಷ ರು. ವೆಚ್ಚದಲ್ಲಿ 117 ಪೈಪುಗಳ ವಿಸ್ತರಣೆ ಮಾಡಲಾಗಿದ್ದು, 23 ಬೋರ್‌ವೆಲ್‌ಗಳ ವಿದ್ಯುದ್ದೀಕರಣ ಮಾಡಲಾಗಿದ್ದು,  9 ಘಟಕಗಳು ವಿದ್ಯುದ್ದೀಕರಣಕ್ಕೆ ಬಾಕಿ ಇದೆ.
70 ಬರಪೀಡಿತ ಹಳ್ಳಿ: ತಿಪಟೂರು ತಾಲೂಕಿನಲ್ಲಿ 70 ಬರಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದ್ದು, 11 ಹಳ್ಳಿಗಳಿಗೆ 22.65 ಲಕ್ಷ ರು. ವೆಚ್ಚದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಿದೆ ಮತ್ತು 20 ಲಕ್ಷ ರು. ವೆಚ್ಚದಲ್ಲಿ 17 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, 182.10 ಲಕ್ಷ ರು. ವೆಚ್ಚದಲ್ಲಿ 87 ಪೈಪುಗಳ ವಿಸ್ತರಣೆ ಮಾಡಲಾಗಿದ್ದು, 87 ಬೋರ್‌ವೆಲ್‌ಗಳ ವಿದ್ಯುದ್ದೀಕರಣ ಮಾಡಲಾಗಿದ್ದು,  5 ಘಟಕಗಳು ವಿದ್ಯುದ್ದೀಕರಣಕ್ಕೆ ಬಾಕಿ ಇದೆ.
ಬಾಕಿ: ಮಧುಗಿರಿ ತಾಲೂಕಿನಲ್ಲಿ 107 ಬರಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದ್ದು, 6 ಹಳ್ಳಿಗಳಿಗೆ 0.56 ಲಕ್ಷ ರು. ವೆಚ್ಚದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಿದೆ ಮತ್ತು 4 ಲಕ್ಷ ರು. ವೆಚ್ಚದಲ್ಲಿ 9 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, 62.02 ಲಕ್ಷ ರು. ವೆಚ್ಚದಲ್ಲಿ 163 ಪೈಪುಗಳ ವಿಸ್ತರಣೆ ಮಾಡಲಾಗಿದ್ದು, 212
ಬೋರ್‌ವೆಲ್‌ಗಳ ವಿದ್ಯುದ್ದೀಕರಣ ಮಾಡಲಾಗಿದ್ದು, 10 ಘಟಕಗಳು ವಿದ್ಯುದ್ದೀಕರಣಕ್ಕೆ ಬಾಕಿ ಇದೆ.
ಕೊರಟಗೆರೆ ತಾಲೂಕಿನಲ್ಲಿ 66 ಬರಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದ್ದು, 5.94 ಲಕ್ಷ ರು. ವೆಚ್ಚದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಿದೆ ಮತ್ತು 3.73 ಲಕ್ಷ ರು. ವೆಚ್ಚದಲ್ಲಿ 6  ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, 4.58 ಲಕ್ಷ ರು. ವೆಚ್ಚದಲ್ಲಿ 71 ಪೈಪುಗಳ ವಿಸ್ತರಣೆ ಮಾಡಲಾಗಿದ್ದು, 115 ಬೋರ್‌ವೆಲ್‌ಗಳ ವಿದ್ಯುದ್ದೀಕರಣ ಮಾಡಲಾಗಿದ್ದು,  12 ಘಟಕಗಳು ವಿದ್ಯುದ್ದೀಕರಣಕ್ಕೆ ಬಾಕಿ ಇದೆ.
ನೀರು ಸರಬರಾಜು: ತುಮಕೂರು ತಾಲೂಕಿನಲ್ಲಿ 245 ಬರಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದ್ದು, 4 ಹಳ್ಳಿಗಳಿಗೆ 5.94 ಲಕ್ಷ ರು. ವೆಚ್ಚದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಿದೆ ಮತ್ತು 27.85 ಲಕ್ಷ ರು. ವೆಚ್ಚದಲ್ಲಿ 16 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು,  341.17 ಲಕ್ಷ ರು. ವೆಚ್ಚದಲ್ಲಿ 165 ೈಪುಗಳ ವಿಸ್ತರಣೆ ಮಾಡಲಾಗಿದ್ದು, 39 ಬೋರ್‌ವೆಲ್‌ಗಳ ವಿದ್ಯುದ್ದೀಕರಣ ಮಾಡಲಾಗಿದ್ದು,  49 ಘಟಕಗಳು ವಿದ್ಯುದ್ದೀಕರಣಕ್ಕೆ ಬಾಕಿ ಇದೆ.
167 ಬರಪೀಡಿತ ಹಳ್ಳಿ: ಚಿ.ನಾ.ಹಳ್ಳಿ ತಾಲೂಕಿನಲ್ಲಿ 167 ಬರಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದ್ದು, 2 ಹಳ್ಳಿಗಳಿಗೆ 1.50 ಲಕ್ಷ ರು. ವೆಚ್ಚದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಿದೆ ಮತ್ತು 42.88 ಲಕ್ಷ ರು. ವೆಚ್ಚದಲ್ಲಿ 78 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು,  53.90 ಲಕ್ಷ ರು. ವೆಚ್ಚದಲ್ಲಿ 161 ಪೈಪುಗಳ ವಿಸ್ತರಣೆ ಮಾಡಲಾಗಿದ್ದು, 126 ಬೋರ್‌ವೆಲ್‌ಗಳ ವಿದ್ಯುದ್ದೀಕರಣ ಮಾಡಲಾಗಿದ್ದು,  11 ಘಟಕಗಳು ವಿದ್ಯುದ್ದೀಕರಣಕ್ಕೆ ಬಾಕಿ ಇದೆ.
ಶಿರಾ ತಾಲೂಕಿನಲ್ಲಿ 191 ಬರಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದ್ದು, 1 ಹಳ್ಳಿಗೆ 1.10 ಲಕ್ಷ ರು. ವೆಚ್ಚದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಿದೆ ಮತ್ತು 94.64 ಲಕ್ಷ ರು. ವೆಚ್ಚದಲ್ಲಿ 99 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, 127.74 ಲಕ್ಷ ರು. ವೆಚ್ಚದಲ್ಲಿ 195 ಪೈಪುಗಳ ವಿಸ್ತರಣೆ ಮಾಡಲಾಗಿದ್ದು, 126 ಬೋರ್‌ವೆಲ್‌ಗಳ ವಿದ್ಯುದ್ದೀಕರಣ ಮಾಡಲಾಗಿದ್ದು,  20  ಘಟಕಗಳು ವಿದ್ಯುದ್ದೀಕರಣಕ್ಕೆ ಬಾಕಿ ಇದೆ.
ಪಾವಗಡ ತಾಲೂಕಿನಲ್ಲಿ 62 ಬರಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದ್ದು, 3 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, 13.30 ಲಕ್ಷ ರು. ವೆಚ್ಚದಲ್ಲಿ 83 ಪೈಪುಗಳ ವಿಸ್ತರಣೆ ಮಾಡಲಾಗಿದ್ದು, 32 ಬೋರ್‌ವೆಲ್‌ಗಳ ವಿದ್ಯುದ್ದೀಕರಣ ಮಾಡಲಾಗಿದ್ದು,  42 ಘಟಕಗಳು ವಿದ್ಯುದ್ದೀಕರಣಕ್ಕೆ ಬಾಕಿ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.