ತುಮಕೂರು

ಬಸ್ ಚಾಲಕನ ಮೇಲೆ ಕಿಡಿಗೇಡಿಗಳ ದಾಳಿ

Published On :

ಕುಣಿಗಲ್: ಹಾಡಹಗಲೇ ಇಬ್ಬರು ಯುವಕರು ಸಾರಿಗೆ ಸಂಸ್ಥೆ ಬಸ್ ಚಾಲಕ ಕಂ ನಿರ್ವಾಹಕನೊಂದಿಗೆ ಜಗಳ  ತೆಗೆದು, ಹದಿಮೂರು ಸಾವಿರ ನಗದು ಅಪಹರಿಸಿ ಪರಾರಿಯಾಗಿರುವ ಘಟನೆ ಕುಣಿಗಲ್ ಪೊಲೀಸ್ ಠಾಣೆಯ ಅಂಚೇಪಾಳ್ಯದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕುಣಿಗಲ್ ನೆಲಮಂಗಲ ಮಧ್ಯ ಸಂಚರಿಸುವ ಸಂಪರ್ಕ ಸಾರಿಗೆಯ ಬಸ್ ಚಾಲಕ ಕಂ ನಿರ್ವಾಹಕ ರವಿಕುಮಾರ್ ಎಂಬಾತ ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಕುಣಿಗಲ್‌ನಿಂದ ನೆಲಮಂಗಲಕ್ಕೆ ತೆರಳುವಾಗ ಬಿದನಗೆರೆ ಗ್ರಾಮದ ಬಳಿ ಇಬ್ಬರು ಯುವಕರು ಬೈಕ್‌ನಲ್ಲಿ ಬಸ್ಸಿನಲ್ಲಿ ಕುಳಿತಿದ್ದ ಯವತಿಯೋರ್ವಳನ್ನು ಚುಡಾಯಿಸಿಕೊಂಡು ಚಲಿಸುತ್ತಿದ್ದ ಬಸ್ಸಿಗೆ ಸಮಾನಾಂತರವಾಗಿ ಬರುತ್ತಿದ್ದುದನ್ನು ಗಮಿಸಿದ, ಚಾಲಕ  ಬೈಕ್ ಸವಾರರಿಗೆ ದೂರ ಹೋಗುವಂತೆ ಹಲವು ಬಾರಿ ಬುದ್ಧಿಹೇಳಿದ.
 ಆದರೆ, ಯುವಕರಿಬ್ಬರು ಅಂಚೇಪಾಳ್ಯ ಸಮೀಪ ಬಸ್ಸಿನ ಚಾಲಕ, ಪ್ರಯಾಣಿಕರನ್ನು ಇಳಿಸಿ ಮುಂದೆ ಹೋಗಲು ಅಣಿಯಾದಾಗ ಏಕಾಏಕಿ ಬೈಕ್ ಸವಾರರು ಬಸ್ಸನ್ನು ಅಡ್ಡಗಟ್ಟಿ, ಬಸ್ಸಿನೊಳಗೆ ನುಗ್ಗಿ ಚಾಲಕನೊಂದಿಗೆ ವಾಗ್ದಾದ ನಡೆಸಿ, ಹಲ್ಲೆಗೆ ಮುಂದಾದರಲ್ಲದೆ ಚಾಲಕ ಕಂ ನಿರ್ವಾಹಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಅತನ ಬಳಿ ಇದ್ದ 13,650 ರು.ಗಳನ್ನು ಲಪಟಾಯಿಸಿದ್ದು, ಬಸ್ಸಿನಲ್ಲಿದ ಪ್ರಯಾಣಿಕರು, ಪುಂಟಾಡ ನಡೆಸಿದ ಯುವಕರ ಅಬ್ಬರಕ್ಕೆ ಹೆದರಿ ಯಾರೂ ಸಹಾಯಕ್ಕೆ ಬರಲಿಲ್ಲವೆನ್ನಲಾಗಿದೆ.  
 ಬಸ್ಸು ಮುಖ್ಯರಸ್ತೆಯಲ್ಲಿ ನಿಂತು ಗಲಾಟೆಯಾಗುವುದನ್ನು ಗಮಿನಿಸಿದ ಇದೇ ಮಾರ್ಗದಲ್ಲಿ ಬರುತ್ತಿದ್ದ ಮತ್ತೊಂದು ಸಾರಿಗೆ ಬಸ್ ಚಾಲಕ ನರಸಿಂಹಮೂರ್ತಿ, ನಿರ್ವಾಹಕ ಸಂಗನಬಸಪ್ಪ, ಆಗಮಿಸಿ ಯುವಕರನ್ನು ಹಿಡಿಯಲು ಮುಂದಾದಾಗ ಯುವಕರು ತಾವು ತಂದಿದ್ದ ಬೈಕ್‌ನಲ್ಲಿ ಪ್ರಯಾಣಿಕರು ನೋಡ, ನೋಡುತ್ತಿದ್ದಂತೆ ಪರಾರಿಯಾದರು.
 ಘಟನೆಗೆ ಸಂಬಂಧಿಸಿದಂತೆ  ರವಿಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಘಟಕ ವ್ಯಸ್ಥಾಪಕರಿಗೆ ಮಾಹಿತಿ ನೀಡಿ, ಶುಕ್ರವಾರ ತಡರಾತ್ರಿ ಕುಣಿಗಲ್ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.