ಕಲಾವಿದರಿಗೆ ನಿರಂತರ ಪ್ರಯತ್ನ ಅಗತ್ಯ
ಕ.ಪ್ರ.ವಾರ್ತೆ, ತುಮಕೂರು, ಮೇ 24
ಕಲಾವಿದರು ತಮ್ಮಲ್ಲಿರುವ ಅಂಜಿಕೆಯನ್ನು ಬಿಟ್ಟು ನಿರಂತರವಾಗಿ ಪ್ರಯತ್ನ ಪಟ್ಟರೆ ಉತ್ತಮ ಕಲಾವಿದರಾಗಿ ಹೊರಹೊಮ್ಮಲು ಸಾಧ್ಯ ಎಂದು ಡಾ.ಲಕ್ಷ್ಮಣದಾಸ್ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕಮನೆವತಿಯಿಂದ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಎರಡು ಹೊಸ ನಾಟಕಗಳ ಪ್ರಯೋಗ ಕಾರ್ಯದಲ್ಲಿ ಹೊಸ ಕಲಾವಿದರು, ಹೊಸ ನಿರ್ದೇಶಕರಿಂದ ಪ್ರದರ್ಶಿಸಲ್ಪಟ್ಟ ಶ್ರೀವಿದ್ಯಾತೀರ್ಥ ಪ್ರಸನ್ನ ಶ್ರೀಪಾದಂಗಳ್ ಅವರ ಚಾಮಣ್ಣನ ಚಿರೋಟಿ ನಾಟಕ ಪ್ರದರ್ಶಿಸಿದ ಕಲಾವಿದರು, ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದರು.
ಕನ್ನಡ ರಂಗಭೂಮಿ,ಅದರಲ್ಲಿಯೂ ಹವ್ಯಾಸಿ ರಂಗಭೂಮಿ ಕುಂಟುತ್ತಿರುವ ಇಂದಿನ ದಿನಗಳಲ್ಲಿ ಹೊಸ ಕಲಾವಿದರು ಮತ್ತು ನಿರ್ದೇಶಕರನ್ನು ಹುಟ್ಟು ಹಾಕುವ ಮೂಲಕ ನಾಟಕಮನೆ ಶ್ಲಾಘನೀಯ ಕೆಲಸ ಮಾಡಿದೆ ಎಂದರು.
ಹೆಸರು ಮಾಡಲಿ: ಚಾಮಣ್ಣನ ಚಿರೋಟಿ ನಾಟಕ ವಸ್ತು ಹಳೆಯದಾದರೂ ಆಸೆಯ ಬಿಸಿಲು ಕುದುರೆ ಏರುವ ಮಂದಿ ಕೊನೆಗೆ ಏನಾಗುತ್ತಾರೆ ಎಂಬುದನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ.
ಕಥಾ ವಸ್ತು ಇಂದಿಗೂ ಪ್ರಸ್ತುತ ಎಂದ ಅವರು, ಹೊಸದಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿರುವ ಕಲಾವಿದರು ನಿರಂತರವಾಗಿ ತಮ್ಮ ಅಭ್ಯಾಸವನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಉತ್ತಮ ಕಲಾವಿದರಾಗಿ ಹೆಸರು ಮಾಡಲಿ ಎಂದು ಹಾರೈಸಿದರು.
ರಂಗನಿರ್ದೇಶಕ ಪರುಶುರಾಮ್ ಹರಪ್ಪನಹಳ್ಳಿ ಮಾತನಾಡಿ,ಈ ನಾಟಕದಲ್ಲಿ ಅಭಿನಯಿಸಿದ ಕಲಾವಿದರು ಹೊಸಬರು, ನಿರ್ದೇಶಕರು ಹೊಸಬರು ಆದರೆ ನಾಟಕಮನೆ ಹಳೆಯದು. ಇಂತಹ ಅನೇಕ ಕಲಾವಿದರು,
ನಿರ್ದೇಶಕರನ್ನು ಹುಟ್ಟು ಹಾಕುವ ಶಕ್ತಿ ನಾಟಕಮನೆಗೆ ಇದೆ. ಹೊಸ ಪರಂಪರೆ ಮುಂದುವರೆಯಲಿ ಎಂದು ಶುಭಕೋರಿದರು.
ಶ್ರೀರಂಗ ರಂಗ ಹವ್ಯಾಸಿ ಕಲಾವೃಂದದ ಎಚ್.ಎಂ.ರಂಗಯ್ಯ ಮಾತನಾಡಿ, ನನ್ನ 35 ವರ್ಷಗಳ ವೃತ್ತಿ ರಂಗಭೂಮಿ ಸೇವೆಯಲ್ಲಿ ನಾನು ಕಂಡಂತೆ ಸಹಾಯಕರಾಗಿ, ಕಲಾವಿದರಾಗಿ ರಂಗಭೂಮಿಗೆ ಬಂದು ಇಂದು
ನಿರ್ದೇಶಕರಾಗಿರುವ ಶಿವಕುಮಾರ್ ತಿಮ್ಲಾಪುರ ಅವರ ಸಾಹಸವನ್ನು ನಾವೆಲ್ಲರೂ ಮೆಚ್ಚಬೇಕು. ಅವರಿಗೆ ಅವಕಾಶ ನೀಡುವ ಮೂಲಕ ನಾಟಕಮನೆ ಒಂದು ಹೊಸ ತಂಡವನ್ನು ಹುಟ್ಟುಹಾಕಿದೆ.
ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ರಂಗದ ಮೇಲೆ ನಿಂತು ತಮ್ಮ ಹಾವಭಾವ, ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ಮನ ಮುಟ್ಟುವ ಕೆಲಸ ಮಾಡಿರುವುದು ನಿಜಕ್ಕೂ ಅಭಿನಂದಾನಾರ್ಹ ಎಂದರು.
ವೇದಿಕೆಯಲ್ಲಿ ರಂಗಸಂಘಟಕ ನಾಟಕಮನೆ ಮಹಾಲಿಂಗು, ಮೇಳೆಹಳ್ಳಿ ದೇವರಾಜು, ಹಿರಿಯ ವೃತ್ತಿ ರಂಗಭೂಮಿ ಕಲಾವಿದ ಹೆಬ್ಬಾಕ ಸಿದ್ದಲಿಂಗಪ್ಪ, ಹೊಸ ನಿರ್ದೇಶಕ ಶಿವಕುಮಾರ್ ತಿಮ್ಲಾಪುರ ಹಾಗೂ ಚಾಮಣ್ಣನ ಚಿರೋಟಿ ನಾಟಕದ ಕಲಾವಿದರಾದ ನಿಜಲಿಂಗಪ್ಪ, ಸಿದ್ದರಾಜು,ಅಭಿಷೇಕ್, ರಘುನಾಥ್, ತ್ರೀನೇಶ್, ಗೋವಿಂದರಾಜು, ಸವಿತಾ ಮುಂತಾದ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

