ಶೈಕ್ಷಣಿಕ ಪ್ರಗತಿಯಿಂದ ಅಭಿವೃದ್ಧಿ ಸಾಧ್ಯ: ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ
ಗುಬ್ಬಿ: ಹಿಂದುಳಿದ ಜನಾಂಗದವರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕಾದರೆ ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಸಾಧ್ಯ ಎಂದು ಶಿಡ್ಲೇಕೋಣೆ ವಾಲ್ಮೀಕಿ ಮಹಾ ಸಂಸ್ಥಾನ ಮಠದ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿಗಳು ತಿಳಿಸಿದರು.
ಪಟ್ಟಣದ ವಾಲ್ಮೀಕಿ ಪತ್ತಿನ ಸಹಕಾರ ಸಂಘದಿಂದ ದ್ವಿಚಕ್ರ ವಾಹನ ವಿತರಣೆ ಮಾಡಿ ಮಾತನಾಡಿದ ಅವರು ಸಮಾಜದಲ್ಲಿ ಒಂದಾಗಿ ಎಲ್ಲರು ಬದುಕಬೇಕಾಗಿದೆ ಮೇಲು ಕೀಳು ಎಂಬ ಭಾವನೆ ಬಿಟ್ಟು ಎಲ್ಲರೂ ಉತ್ತಮವಾಗಿ ಬದುಕುಬೇಕು. ನಾವು ಬದುಕುವುದು ಅಲ್ಪ ದಿನಗಳು, ಆ ಬದುಕಿದ ದಿನಗಳಲ್ಲಿ ಒಳ್ಳೆಯದನ್ನು ಮಾಡುತ್ತ ಕಳೆಯಬೇಕು. ಎಲ್ಲವುಗಳಿಗಿಂತ ಧಾರ್ಮಿಕ ಜೀವನ ಬಹಳಮುಖ್ಯವಾಗಿದೆ. ಶಿಕ್ಷಣ ಬಹಳ ಮುಖ್ಯ ಹಾಗೂ ಸಮಾಜಮುಖಿಯಾಗಿ ಬದುಕಲು ಅವರಿಗೆ ಧೈರ್ಯವನ್ನು ತುಂಬುವ ವ್ಯಕ್ತಿಗಳು ಬೇಕಾಗಿದೆ ಎಂದರು. ಸಹಕಾರ ಸಂಘದ ಅಧ್ಯಕ್ಷರು ಅಲ್ಪ ಕಾಲದಲ್ಲಿ ಮಹತ್ತರ ಸಾಧನೆಯನ್ನು ಮಾಡಿದ್ದಾರೆ. ಈಗಾಗಲೆ ಸುಮಾರು 10 ಲಕ್ಷದಷ್ಟು ಠೇವಣಿಯನ್ನು ಸಂಗ್ರಹಿಸುವ ಮೂಲಕ ಬ್ಯಾಂಕ್ನ ಸರ್ವಾಂಗೀಣ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ಕೇವಲ ಸಾಲವನ್ನು ಮಾತ್ರ ಕೂಡದೆ ಅವರಿಗೆ ಸಾಲ ನೀಡಿ ಸಾಲದಿಂದ ಅವರು ಅಭಿವೃದ್ಧಿ ಮಾಡುವಲ್ಲಿ ಬ್ಯಾಂಕ್ ಸಹಕರಿಸಲಿ ಎಂದು ತಿಳಿಸಿದರು. ಸಹಕಾರ ಸಂಘದ ಅಧ್ಯಕ್ಷ ಜಿ,ಆರ್. ರವೀಶ್ ಮಾತನಾಡಿ ನಮ್ಮಲ್ಲಿ ದ್ವಿಚಕ್ರ ವಾಹನ, ಚಿನ್ನ, ಮನೆ ಹಾಗೂ ಸ್ವ ಉದೋಗಗಳಿಗೂ ಸಾಲವನ್ನು ವಿತರಿಸಲಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

