ನೀತಿ ಸಂಹಿತೆ, ಪ್ರಕ್ರಿಯೆ ಬಗ್ಗೆ ಚುನಾವಣಾಧಿಕಾರಿ ಮಾಹಿತಿ
ಕಾರ್ಕಳ: ಮತದಾನದ ವೇಳೆ ಹಾಗೂ ಚುನಾವಣಾ ನೀತಿ ಸಂಹಿತೆ ಸೇರಿದ್ದಂತೆ ಇನ್ನಿತರ ಚುನಾವಣಾ ಪ್ರಕ್ರಿಯೆ ಬಗ್ಗೆ ವಿಶೇಷ ಚುನಾವಣಾಧಿಕಾರಿ ಪ್ರಸನ್ನ ವಿ. ಯವರು ಪತ್ರಿಕೆ ಮಾಹಿತಿ ನೀಡಿದ್ದು, ಮತದಾರರಿಗೆ ರಾಜಕೀಯ ಪಕ್ಷ ಹಣ- ಹೆಂಡ ಇನ್ನಿತರ ಆಮಿಷ ಬೀಳದ್ದಂತೆ ಕಿವಿ ಮಾತು ಹೇಳಿದ್ದಾರೆ.
ಮಂಗಳವಾರ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮತದಾನ ಬೆ. 7ರಿಂದ ಸಂಜೆ 5 ತನಕ ಹಾಗೂ 196 ಮತಗಟ್ಟೆಗಳಲ್ಲಿ 26 ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಲಾಗಿದ್ದು, 14 ಮಂದಿ ಸೆಕ್ಟರ್ ಅಧಿಕಾರಿಗಳು, ಮೂರು ಪ್ಲೆಯಿಂಗ್ ಹಾಗೂ ತಾಲೂಕು ನೀತಿ ಸಂಹಿತೆ ತಂಡ ಬೇಕಲ್ ಅಧ್ಯಕ್ಷತೆಯಲ್ಲಿ ಚುನಾವಣಾ ವೀಕ್ಷಣಾ ಅಧಿಕಾರಿ ತಿಮ್ಮರಾಯಪ್ಪ ಹಾಗೂ ಐಎ.ಎಸ್ ಹಿರಿಯ ಅಧಿಕಾರಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಮತದಾನ ಸುಸೂತ್ರ ನಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ನೀತಿ-ಸಂಹಿತೆ ಜಾರಿ ನಡೆಸುವಾಗ ಮೊದಲು ಸ್ಥಳೀಯ ಸಂಸ್ಥೆಗಳಿಂದ, ಚುನಾವಣಾಧಿಕಾರಿಗಳಿಂದ, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಬೆಳ್ಮಣ್, ಸೋಮೇಶ್ವರದಲ್ಲಿ ಸಾಣೂರು, ಬಜಗೋಳಿಗಳಲ್ಲಿ ನಾಲ್ಕು ಚೆಕ್ಪೋಸ್ಟ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಡಿವೈಎಸ್ಪಿ ಜಯಂತ್, ತಹಸೀಲ್ದಾರ್ ನಿರ್ಮಲಾದೇವಿ, ಪ್ರಭಾರ ತಹಸೀಲ್ದಾರ್ ಮಾಣಿಕ್ಯ, ವೃತ್ತನಿರೀಕ್ಷಕ ವೆಲೆಂಟೈನ್ ಡಿಸೋಜಾ ಇನ್ನಿತರರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

