ರೇಲ್ವೆ ಯಾತ್ರಿ ಸಂಘದಿಂದ ಸಹಾಯಾರ್ಥ ನಾಟಕ
ಉಡುಪಿ: ರೈಲು ಯಾತ್ರಿಕರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುವ ಉದ್ದೇಶದಿಂದ ನಿವೃತ್ತ ಸೇನಾಧಿಕಾರಿ ಆರ್.ಎಲ್. ಡಯಾಸ್ ಅವರ ಆಸಕ್ತಿಯಿಂದ 2002ರಲ್ಲಿ ಪ್ರಾರಂಭವಾದ ಉಡುಪಿ ರೇಲ್ವೆ ಯಾತ್ರಿ ಸಂಘ ರೈಲು ಪ್ರಯಾಣಿಕರಿಗಾಗಿ ಹತ್ತು ಹಲವು ಸೌಕರ್ಯಗಳನ್ನು ತರುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಹೋರಾಟಗಳಿಗೆ ತಗಲುವ ವೆಚ್ಚವನ್ನು ಭರಿಸುವುದಕ್ಕೆ ಸಂಘಟನೆ ಆರ್ಥಿಕ ಸಮಸ್ಯೆ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘವನ್ನು ಆರ್ಥಿಕವಾಗಿ ಸುದೃಢಗೊಳಿಸುವುದಕ್ಕಾಗಿ ಸದಸ್ಯರು ನಾಟಕ ಪ್ರದರ್ಶನವೊಂದನ್ನು ಆಯೋಜಿಸುವುದಕ್ಕೆ ಹೊರಟಿದ್ದಾರೆ.
ಪ್ರಸ್ತುತ ಸಂಘದ ಸದಸ್ಯರು ಸದಸ್ಯತ್ವ ಶುಲ್ಕ ಎಂದು ರು. 200 ಪಾವತಿಸುತ್ತಿದ್ದರೂ, ಅದರಿಂದ ಸಂಘದ ಹೋರಾಟ, ಪದಾಧಿಕಾರಿಗಳ ಓಡಾಟ ಇತ್ಯಾದಿ ಖರ್ಚುಗಳನ್ನು ಸರಿದೂಗಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಘದ ಉಪಾಧ್ಯಕ್ಷ ಕೆ.ಆರ್. ಮಂಜ ಮತ್ತು ನಿರ್ದೇಶಕ ಶೇಖರ ಎನ್. ಕೋಟ್ಯಾನ್ ಅವರ ನೇತೃತ್ವದಲ್ಲಿ ಮೇ 23ರಂದು ನಗರದ ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ನಾಟಕವೊಂದನ್ನು ಆಯೋಜಿಸಿದ್ದು, ಇದರ ಟಿಕೆಟುಗಳ ಮಾರಾಟದಿಂದ ಬಂದ ಹಣವನ್ನು ಠೇವಣಿಯಾಗಿಟ್ಟು ಅದರ ಬಡ್ಡಿಯಿಂದ ಸಂಘದ ಖರ್ಚುವೆಚ್ಚಗಳನ್ನು ನಿಭಾಯಿಸಲಾಗುವುದು. ಸಾರ್ವಜನಿಕರಿಗಾಗಿ ಹೋರಾಟ ನಡೆಸುತ್ತಿರುವ ಈ ಸಂಘದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹಿಸಬೇಕು ಎಂದು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

