ವೈದಿಕರು ಖುದ್ದು ಸಂಸ್ಕಾರಯುತ ಆಗಬೇಕು: ರಾಘವೇಶ್ವರ ಶ್ರೀ
ವಿಟ್ಲ: ಭಗವಂತ ಮಾತ್ರ ನಿರ್ದೋಷಿ ಮತ್ತು ಗುಣವಂತ. ಮಾನವ ಅಂದ ಮೇಲೆ ಸಂಸ್ಕಾರ ಮುಖ್ಯ. ವೈದಿಕರು ಖುದ್ದು ಸಂಸ್ಕಾರಯುತರಾಗಿ ಇತರರಿಗೂ ಮಾದರಿಯಾಗಿರಬೇಕು ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಶನಿವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ವೈದಿಕ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ಮಠ ಎಂಬುದು ಸುಖ, ಮುಕ್ತಿ ಮತ್ತು ನೆಮ್ಮದಿಯ ಕೇಂದ್ರ. ಶಿಷ್ಯವರ್ಗ ಮಠವನ್ನು ಪ್ರತಿನಿಧಿಸುವ ಜವಾಬ್ದಾರಿ ಹೊಂದಿರಬೇಕು. ಕುಲಪುರೋಹಿತರು ಶ್ರೀ ಮಠದ ಹರಿಕಾರರಾಗಿ ಮಠದ ಕಾರ್ಯ ಕಲಾಪಗಳ ಬಗ್ಗೆ ಪ್ರತಿ ಮನೆಗೆ ಮಾಹಿತಿ ರವಾನೆ ಮಾಡುವವರಾಗಬೇಕು. ಸಂಧ್ಯಾವಂದನೆ ಮತ್ತು ರುದ್ರ ಕಲಿಕಾ ಅಭಿಯಾನ ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಕುಲಪುರೋಹಿತನಿಂದಾಗಬೇಕು ಎಂದು ತಿಳಿಸಿದರು.
ವಿದ್ವಾಂಸರಾದ ಪಳ್ಳತ್ತದ್ಕ ಶಂಕರನಾರಾಯಣ ಘನಪಾಠಿ ಮತ್ತು ಅಮೈ ಅನಂತಕೃಷ್ಣ ಘನಪಾಠಿ ಅವರನ್ನು ಶ್ರೀಗಳು ಗೌರವಿಸಿದರು. ಒಟ್ಟು 8 ನಿರ್ಣಯಗಳನ್ನು ಅಂಗೀಕರಿಸಲಾಯಿತು. ಸುಮಾರು 200 ಮಂದಿ ವೈದಿಕರು ಪಾಲ್ಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

