ಸುದ್ದಿ ಸಂಕ್ಷೇಪ
ಕಾರ್ಕಳ ತಾಲೂಕಿನ 4 ರಸ್ತೆ ಅಭಿವೃದ್ಧಿಗೆ ಅನುದಾನ
ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖ ನಾಲ್ಕು ರಸ್ತೆಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮಂಜೂರುಗೊಂಡಿದೆ. ಚುನಾವಣೆ ಸಂದರ್ಭದಲ್ಲಿ ಮತಯಾಚನೆ ವೇಳೆ ತಾನು ಭರವಸೆ ನೀಡಿದಂತೆ ಶಾಸಕನಾಗಿ ಆಯ್ಕೆಯಾದ ಕೂಡಲೇ ಗ್ರಾಮ ಸಡಕ್ ಯೋಜನೆಯಡಿ ನೂತನ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ತಾಲೂಕಿನ ಪ್ರಮುಖ ನಾಲ್ಕು ರಸ್ತೆಗಳಿಗೆ ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕ ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅನುದಾನ ಬಿಡುಗಡಗೊಂಡಿರುವ ರಸ್ತೆಗಳೆಂದರೆ, ಕೆಮ್ಮಣ್ಣು ನಿಟ್ಟೆಯಿಂದ ಬೋಳಾ ಗ್ರಾಮ ಸಂಪರ್ಕ ರಸ್ತೆ ಡಾಮರೀಕರಣ, ಸಾಣೂರು ಕುಂಟಲ್ಪಾಡಿ ಸಂಪರ್ಕ ರಸ್ತೆ, ಮಿಯಾರು ಕಳತ್ರಪಾದೆಯಿಂದ ಕರ್ಮರ್ಕಟ್ಟೆ ರಸ್ತೆ, ಮಂಜರಪಲ್ಕೆ ಕಲ್ಲೊಟ್ಟು- ಸಚ್ಚರಿಪೇಟೆ ರಸ್ತೆ ಡಾಮರೀಕರಣ.
ಇಂದು ವಿದ್ಯುತ್ ವ್ಯತ್ಯಯ
ಮಂಗಳೂರು: ನಿಟ್ಟೂರು ವಿದ್ಯುತ್ ಉಪಕೇಂದ್ರದಲ್ಲಿ 110/33 ಕೆ.ವಿ.ಎ ವಿದ್ಯುತ್ ಪರಿವರ್ತಕ ಅಳವಡಿಸಿ 33 ಕೆವಿಎ ರೆಫರೆನ್ಸ್ ನಿರ್ಮಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ್ರ ಆ.21ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಕೊಡವೂರು 11 ಕೆವಿಎ ಫೀಡರ್, ಕಲ್ಯಾಣಪುರ 11 ಕೆವಿಎ ಫೀಡರ್, ಕುಡ್ಸೆಂಪು 11 ಕೆವಿಎ ಫೀಡರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಂಬಂಧಪಟ್ಟ ಗ್ರಾಹಕರು ಸಹಕರಿಸಬೇಕಾಗಿ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

