ಸುದ್ದಿ ಸಂಕ್ಷೇಪ
ಕಣ್ಣೀರು ಹಾಕಿಸಿದವರಿಗೆ ಶಾಪ ತಟ್ಟಿದೆ: ಪೂಜಾರಿ
ಮಂಗಳೂರು: ಮಹಿಳೆಯನ್ನು ಕಣ್ಣೀರು ಹಾಕಿಸಲು ಕಾರಣಕರ್ತರಾದವರಿಗೆ ಲೋಕಸಭಾ ಉಪಚುನಾವಣೆಯಲ್ಲಿ ತಕ್ಕ ಶಾಸ್ತಿಯಾಗಿದೆ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.
ಶನಿವಾರ ಮಂಗಳೂರಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ರಾಮಾಯಣ ಹಾಗೂ ಮಹಾಭಾರತ ಕಾಲದಲ್ಲಿ ಸೀತೆ ಹಾಗೂ ದ್ರೌಪದಿಗೆ ಕಣ್ಣೀರು ಹಾಕಿಸಿದವರು ಏನಾದರು ಎಂಬುದು ಎಲ್ಲರಿಗೆ ಗೊತ್ತಿರುವ ಸಂಗತಿ. ಈಗಲೂ ಮಹಿಳೆಯರ ಕಣ್ಣೀರು ಹಾಕಿಸಿದರೆ ಅವರ ಶಾಪ ತಟ್ಟದಿರುವುದಿಲ್ಲ ಎಂದು ಮಂಡ್ಯ ಜೆಡಿಎಸ್ ಹೆಸರೆತ್ತದೆ ಪೂಜಾರಿ ನುಡಿದರು. ರಾಜಕೀಯದಲ್ಲಿ ಸತ್ಯ ಮತ್ತು ನೈತಿಕತೆ ಇಲ್ಲದಿದ್ದರೆ ಜನರು ಅವರನ್ನು ಬೆಂಬಲಿಸುವುದಿಲ್ಲ. ಜೆಡಿಎಸ್‌ನ ಮೊಸಳೆ ಕಣ್ಣೀರನ್ನು ಜನತೆ ನಂಬಲಿಲ್ಲ. ಈ ಹಿಂದೆ ಬಿಜೆಪಿ-ಜೆಡಿಎಸ್ ಮೈತ್ರಿಯಾದಾಗಲೂ ದೇವೇಗೌಡರು ಮೈತ್ರಿ ಗೊತ್ತಿಲ್ಲ ಎಂದಿದ್ದರು, ಹಾಗಾಗಿ ಈ ಬಾರಿಯೂ ಗೌಡರ ಢೋಂಗಿ ಜಾತ್ಯತೀತತೆಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಇಂದಿನಿಂದ ಸಿಟಿ
ಬಸ್ ದರ ಏರಿಕೆ
ಮಂಗಳೂರು: ಮಂಗಳೂರು ಸಿಟಿ ಬಸ್ ಪ್ರಯಾಣ ದರ ಪರಿಷ್ಕರಿಸುವ ಕುರಿತು ಹೈಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಆ. 25 ರಿಂದ ಬಸ್‌ಗಳ ಪ್ರಯಾಣ ದರ ಏರಿಕೆಯಾಗಲಿದೆ ಎಂದು ದ.ಕ. ಬಸ್ ಮಾಲಕರ ಸಂಘ ಅಧ್ಯಕ್ಷ ನೆಲ್ಸನ್ ಪಿರೇರಾ ಹೇಳಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಬಸ್ ಪ್ರಯಾಣ ದರ ಶೇ. 10 ರಿಂದ 15 ಏರಿಕೆಯಾಗಿದೆ. ಇದರಿಂದ ಬಸ್ ಮಾಲಕರಿಗಾಗುವ ನಷ್ಟವನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಲು ಸಾಧ್ಯ. ಸರ್ಕಾರದ ಆದೇಶದಂತೆ ಸಾರಿಗೆ ಪ್ರಾಧಿಕಾರದ ಗಮನಕ್ಕೆ ತಂದಿದ್ದು ಪ್ರಯಾಣ ದರ ಏರಿಕೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

