ಉಡುಪಿ

ದೇವಭಕ್ತಿ ಜಾಗೃತವಾದಾಗ ಮನುಷ್ಯತ್ವದ ಜಾಗೃತಿ: ಕೇಮಾರು ಶ್ರೀ

Published On :

ಉಡುಪಿ: ಮಾತೃಭಕ್ತಿ ಮತ್ತು ಗುರುಭಕ್ತಿಯ ಮೂಲಕ ದೇವಭಕ್ತಿ ಜಾಗೃತವಾದಾಗ ಮನುಷ್ಯತ್ವದ ಜಾಗೃತಿಯಾಗುತ್ತದೆ ಎಂದು ಶ್ರೀ ಕ್ಷೇತ್ರ ಕೇಮಾರು ಶ್ರೀಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಬಂಟಕಲ್ಲು- 92 ಹೇರೂರು ಶ್ರೀಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ ವತಿಯಿಂದ ಶನಿವಾರ ನಡೆದ 30ನೇ ವರ್ಷದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ತುಳುನಾಡಿನ ಪರಂಪರೆಯನ್ನು ಉಳಿಸಿ, ಮಕ್ಕಳಲ್ಲಿ ದೇಶೀಯ ಸಂಸ್ಕಾರವನ್ನು ಬೆಳೆಸುವಂತೆ ಸ್ವಾಮೀಜಿ ಕರೆ ನೀಡಿದರು.
ಮುಖ್ಯ ಅತಿಥಿ, ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ನಮ್ಮ ದೇಶ ಪುಣ್ಯಕ್ಷೇತ್ರಗಳ ತವರೂರು. ಉತ್ತಮ ಆಚಾರ-  ವಿಚಾರಗಳು ಸಮೃದ್ಧವಾಗಿದ್ದು, ಅವುಗಳನ್ನು ಪುಶ್ಚೇತನಗೊಳಿಸಲು ಆರಾಧನಾ ಉತ್ಸವ ಪ್ರೇರಣೆಯಾಗಲಿ ಎಂದರು.
ಸಂಘದ ಸ್ಥಾಪಕ ಅಧ್ಯಕ್ಷ ದೇವದಾಸ ಜೋಗಿ, ಶಂಕರ ದೇವಾಡಿಗ, ಅರವಿಂದ ಕೋಟ್ಯಾನ್, ಮಹಿಳಾ ಸಂಘಟಕಿ ವಸಂತಿ ಅಶೋಕ್ ಆಚಾರ್ಯ, ಸಮಾಜ ಸೇವಕ ಮೆಸ್ಕಾಂ ಲೈನ್‌ಮ್ಯಾನ್ ಸುನಿಲ್, ನವಚೇತನ ಮಹಿಳಾ ಮಂಡಳಿ ಅಧ್ಯಕ್ಷೆ ವಿನೋದಾ ಜಗದೀಶ್ ಆಚಾರ್ಯ ಅವರನ್ನು ಶ್ರೀಗಳು ಸನ್ಮಾನಿಸಿದರು.
ಮಂಡಳಿಯ ಗೌರವ ಅಧ್ಯಕ್ಷ ಹಾಗೂ ಮಜೂರು ಪಂಚಾಯಿತಿ ಮಾಜಿ ಅಧ್ಯಕ್ಷ ಹೇರೂರು ಗಣೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಬಿ. ಪುಂಡಲೀಕ ಮರಾಠೆ ಇದ್ದರು.
ಮಂಡಳಿಯ ಅಧ್ಯಕ್ಷ ದಿನೇಶ ದೇವಾಡಿಗ ಸ್ವಾಗತಿಸಿದರು.
ಮಾಧವ ಆಚಾರ್ಯ ಹಾಗೂ ಅರವಿಂದ ಕೋಟ್ಯಾನ್ ನಿರೂಪಿಸಿ, ಉದಯ ಎಸ್. ದೇವಾಡಿಗ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.