ಉಡುಪಿ

ಸವಲತ್ತಿಗಾಗಿ ಹಿಂದುಳಿದವರೆನ್ನುವ ಬ್ರಾಹ್ಮಣೇತರರು

Published On :

ಉಡುಪಿ: ಬ್ರಾಹ್ಮಣ ವರ್ಗ ಹೊರತು ಪಡಿಸಿ ಇತರೆ ವರ್ಗದವರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಲು ತಮ್ಮನ್ನು ಹಿಂದುಳಿದ ವರ್ಗದವರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅಭಿಪ್ರಾಯಯಪಟ್ಟರು.  ಇಲ್ಲಿನ ಅದಮಾರು ಮಠದ ಅತಿಥಿಗೃಹದಲ್ಲಿ ಭಾನುವಾರ ನಡೆದ ಸೌತ್ ಕೆನರಾ, ಕಾಸರಗೋಡು ದ್ರಾವಿಡ ಬ್ರಾಹ್ಮಣ ಎಜುಕೇಷನ್ ಸೊಸೈಟಿಯ 51ನೇ ವಾರ್ಷಿಕ ಸಭೆ ಮತ್ತು ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಉಚಿತ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಬ್ರಾಹ್ಮಣರ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ಸಮಾಜದಲ್ಲಿ ಇನ್ನಿತರ ವರ್ಗಗಳನ್ನು ಸರಿದಾರಿಯಲ್ಲಿ ನಡೆಸಲು ಬ್ರಾಹ್ಮಣ ವರ್ಗವು ಸರಿ ಹಾಗೂ ತಪ್ಪು ದಾರಿಗಳನ್ನು ವಿಮರ್ಶಿಸಿ ಮುನ್ನಡೆದುಕೊಂಡು ಹೋಗಬೇಕಾಗಿದೆ ಎಂದರು. ಇಂದಿನ ಮಕ್ಕಳಿಗೆ ಕೇವಲ ತಾಂತ್ರಿಕತೆ ಹಾಗೂ ವೈದ್ಯಕೀಯ ರಂಗದ ಬಗ್ಗೆ ಆಸಕ್ತಿ ಇದೆ. ಇದನ್ನು ಹೊರತು ಪಡಿಸಿ ಸಮಾಜದಲ್ಲಿ ಇನ್ನೂ ಹಲವು ಕಾರ್ಯಕ್ಷೇತ್ರಗಳಿದ್ದು, ಅದರತ್ತವೂ ದೃಷ್ಟಿ ಹಾಯಿಸಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.