ಉಡುಪಿ

ಸಾಗರಿಕಾ ಘೋಷ್ ವಿರುದ್ಧ ಪ್ರತಿಭಟನೆ

Published On :

ಮಣಿಪಾಲ: ಇತ್ತೀಚೆಗೆ ಇಲ್ಲಿನ ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎನ್‌ಎನ್- ಐಬಿಎನ್ ಸಹಸಂಪಾದಕಿ ಸಾಗರಿಕಾ ಘೋಷ್ ಅವರು ಕಾಂಗ್ರೆಸ್ ನಾಯಕರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಸೋಮವಾರ ಮಣಿಪಾಲದಲ್ಲಿ ಪ್ರತಿಭಟನೆ ನಡೆಸಲಾಯಿತು.
ಘೋಷ್ ಅವರು ಪ್ರಧಾನಿ ಮನಮೋಹನ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಹೇಳಲಾಗಿದ್ದು, ಆಕೆ ಉಳಿದುಕೊಂಡಿದ್ದ ಮಣಿಪಾಲದ ಹೊಟೇಲ್ ವ್ಯಾಲಿವ್ಯೂ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಮಣಿಪಾಲ ಪೊಲೀಸರು ಮಧ್ಯ ಪ್ರವೇಶಸಿ, ಪ್ರತಿಭಟನಾನಿರತರೊಂದಿಗೆ ಸಮಾಲೋಚನೆ ನಡೆಸಿ ಪ್ರತಿಭಟನೆ ಕೊನೆಗೊಳಿಸಿದರು.

ಜಿಲ್ಲಾ ವರ್ತಕರ ಸಂಘದಿಂದ ಆರ್ಥಿಕ ನೆರವು
ಉಡುಪಿ: ಜಿಲ್ಲಾ ವರ್ತಕರ ಸಂಘದಿಂದ ಐರೋಡಿ ಸರ್ಕಲ್ ಬಳಿಯ ರಿಕ್ಷಾ ಚಾಲಕರು ಹಾಗೂ ಮಾಲೀಕರ ಸಹಕಾರದಿಂದ ಸ್ವಾತಂತ್ರ್ಯೋತ್ಸವದಂದು ಉಚಿತ ಪುಸ್ತಕ ವಿತರಣೆ, ಮದುವೆಗೆ, ಗೃಹಪ್ರವೇಶಕ್ಕೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡಲಾಯಿತು. ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ, ಉಪಾಧ್ಯಕ್ಷ ಎಂ. ವಸಂತ, ಕಾರ್ಯದರ್ಶಿ ಪಿ. ನಾಗರಾಜ ಅಡಿಗ, ಸಂಪರ್ಕಾಧಿಕಾರಿ ವಿಶ್ವನಾಥ ಗಂಗೊಳ್ಳಿ, ಕೋಶಾಧಿಕಾರಿ ಡಾ. ಪದ್ಮನಾಭ ಕೇಕುಣ್ಣಾಯ, ಪದಾಧಿಕಾರಿ ಎಂ. ವಿಠಲ, ರಾಜಸಾಬ್ ನಿಟ್ಟೂರು, ಸತೀಶ ಕಿಮಿ, ಪರಮೇಶ್ವರ, ಕೊಡಂಕೂರು ದೇವರಾಜ ಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.