ಉಡುಪಿ

ಸ್ವಸಹಾಯ ಸಂಘದ ಕುಸ್ವಾರ್ ತಯಾರಿ

Published On :

ಬ್ರಹ್ಮಾವರ: ಡಿ. 25ರಂದು ಆಚರಿಸಲಾಗುವ ಕ್ರೈಸ್ತ ಬಂಧುಗಳ ಕ್ರಿಸ್ಮಸ್ ಬ್ಬಕ್ಕಾಗಿ ವಾರದ ಮೊದಲೇ ತಯಾರಿಗಳು ಆರಂಭವಾಗಿವೆ. ವಿಶೇಷ ಎಂದರೇ ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪದ ಪಾಂಡೇಶ್ವರ- ಸಾಸ್ತಾನ ಗ್ರಾಮದಳ ಕ್ರೈಸ್ತ ಸ್ವಸಹಾಯ ಸಂಘಟನೆಗಳ ಸದಸ್ಯೆಯರು ಈ ಬಾರಿ ಸಾಮೂಹಿಕವಾಗಿ ಕ್ರಿಸ್ಮಸ್ ಕುಸ್ವಾರ(ವಿಶೇಷ ತಿಂಡಿಗಳ ತಯಾರಿ ಹಾಗೂ ವಿತರಣೆ)ನ್ನು ತಯಾರಿಸಿದ್ದಾರೆ.
ಸಾಸ್ತಾನದ ಮದರ್ ತೆರೆಸಾ, ಎಂಜಲ್ ಹಾಗೂ ಸೈಂಟ್  ಎಂಟನಿ ಸ್ವಸಹಾಯ ಸಂಘದ ಸದಸ್ಯೆಯರು ಒಟ್ಟಾಗಿ ಸೇರಿ ಕ್ರಿಸ್ಮಸ್ ತಿಂಡಿಗಳಾದ ಅಕ್ಕಿಯ ಲಾಡು, ನೆವ್ರಿ, ಕುಕ್ಕಿಸಾಂ, ಕಾರಕಡ್ಡಿ, ಚಕ್ಕುಲಿ, ಇತ್ಯಾದಿಗಳನ್ನು ಒಂದೇ ಮನೆಯಲ್ಲಿ ಒಟ್ಟಾಗಿ ಸೇರಿ ತಯಾರಿಸಿದ್ದು, ಈ ಕುಸ್ವಾರನ್ನು ಕ್ರಿಸ್ಮಸ್ ಮುನ್ನಾದಿನವಾದ 24ರಂದು ಸಂಜೆ ಮನೆ ಮನೆಗಳಿಗೆ ತೆರಳಿ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ.
 ಇಂದಿನ ಕಾಲದಲ್ಲಿ ಬಹುತೇಕರು ಕ್ರಿಸ್ಮಸ್ ತಿಂಡಿಗಾಗಿ ಬೇಕರಿಗಳನ್ನೇ ಅವಲಂಬಿಸಿದ್ದಾರೆ. ಇದರಿಂದಾಗಿ ಕ್ರೈಸ್ತ ಸಮುದಾಯದ ಸಂಸ್ಕೃತಿಯ ಒಂದು ಭಾಗವಾಗಿದ್ದ ಕುಸ್ವಾರ್ ಕ್ರಮೇಣ ನಶಿಸಲಾರಂಭಿಸಿದೆ. ಇದನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಸಲುವಾಗಿ ಈ ಒಂದು ಪ್ರಯತ್ನವನ್ನು ಸಂಘಟನೆ ಮೂಲಕ ಆರಂಭಿಸಲಾಗಿದೆ ಎನ್ನುತ್ತಾರೆ ಸಂಘಟನೆಯ ಪದಾಧಿಕಾರಿ ಮೇಬಲ್ ಡಿಸೋಜಾ.
ಸಂಘಟನೆಗಳ ಪದಾಧಿಕಾರಿಗಳಾದ ಸಿಲ್ವೆಸ್ಟರ್ ಡಿಸೋಜಾ, ಗೊಡ್ವಿನ್ ಗೊನ್ಸಾಲ್ವಿಸ್, ಕ್ಲೋಡ್ ಲೂವಿಸ್, ವೀಣಾ ಲೂವಿಸ್, ಜೀನ್ ಮೇರಿ ಲೂವಿಸ್, ಫ್ರೀಡಾ ಡಿಕೋಸ್ತಾ, ಮರಿಯಾ ರಾಣಿ ಆಲ್ಮೇಡಾ, ಶಾಲೆಟ್ ಡಿಸೋಜಾ, ಮಾರ್ಗರೇಟ್ ಟೆಲ್ಲಿಸ್, ಮರಿಯಾ ಲೂವಿಸ್ ತೊಡಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.