ಸಾಸ್ತಾನ ಚರ್ಚ್ ವಾರ್ಷಿಕ ಮಹೋತ್ಸವ
ಉಡುಪಿ: ನಮ್ಮ ನೆರೆಹೊರೆಯ ಬಂಧುಗಳಲ್ಲಿ ದೇವರನ್ನು ಕಂಡಾಗ ನಾವು ನಿಜಕ್ಕೂ ದೇವರ ಆಶೀರ್ವಾದಗಳನ್ನು ಪಡೆಯಲು ಸಾಧ್ಯ ಎಂದು ಮಂಗಳೂರು ಜೆಪ್ಪು ಸಂತ ಜೋಸೆಫ್ ಕಾಲೇಜಿನ ಪ್ರಾಂಶುಪಾಲರಾದ ವಂ. ಪ್ರಕಾಶ್ ಡಿಸೋಜಾ ಹೇಳಿದರು. ಅವರು ಭಾನುವಾರ ಸಾಸ್ತಾನ ಸಂತ ಅಂತೋನಿ ದೇವಾಲಯದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಜರುಗಿದ ಪರಮ ಪ್ರಸಾದ ಮೆರವಣಿಗೆ ಹಾಗೂ ಭ್ರಾತೃತ್ವದ ದಿನಾಚರಣೆಯ ಪ್ರವಚನ ನೀಡಿದರು. ಚರ್ಚಿನ ಧರ್ಮಗುರುಗಳಾದ ವಂ. ವಲೇರಿಯನ್ ಫರ್ನಾಂಡಿಸ್ ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದವಿತ್ತರು.
ಉಡುಪಿ: ದಯಾನಂದ ನೇತ್ರಾಲಯ ಉದ್ಘಾಟನೆ
ಉಡುಪಿ: ಏಮ್ ಫಾರ್ ಸೇವಾ ಸಂಸ್ಥೆಯ ನೂರರ ಶಾಖೆ ಉತ್ತರ ಪ್ರದೇಶದಲ್ಲಿ ಕಾರ್ಯಾರಂಭಗೊಳ್ಳುತ್ತಿರುವ ಸಂಭ್ರಮವನ್ನು ಬಂಟಕಲ್ಲು ಅರಸೀಕಟ್ಟೆಯಲ್ಲಿರುವ ಏಮ್ ಫಾರ್ ಸೇವಾ ಸಂಸ್ಥೆ ಶಾಖೆ ದಯಾನಂದ ನೇತ್ರಾಲಯದಲ್ಲಿ ಉತ್ಸವ-100 ಕಾರ್ಯಕ್ರಮವನ್ನು ಇತ್ತೀಚಿಗೆ ಆಯೋಜಿಸಿತು. ಕಟ್ಟಡದ ದಾನಿ ಪ್ರೊ.ಪಿ.ವಿ.ಪ್ರಭು ಉದ್ಘಾಟಿಸಿದರು. ಬೆಳ್ಳೆ ಗ್ರಾಪಂ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಮಾಜಿ ಅಧ್ಯಕ್ಷ ಕೆ. ದೇವದಾಸ ಹೆಬ್ಬಾರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮಾನಂದ ನಾಯಕ್, ಬಂಟಕಲ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ ಮತ್ತಿತರರು ಇದ್ದರು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರಸ್ತೆ ಕಾಂಕ್ರೀಟಿಕರಣ ಗುದ್ದಲಿಪೂಜೆ
ಉಡುಪಿ: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಇಲ್ಲಿನ ಕುಂಜಾಲು ಗ್ರಾಪಂ ಬೆಳ್ಮಾರು ಉಮಾಮಹೇಶ್ವರಿ ದೇವಸ್ಥಾನ ರಸ್ತೆ ಕಾಂಕ್ರಿಟೀಕರಣ ಗುದ್ದಲಿ ಪೂಜೆಯನ್ನು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ನೆರವೇರಿಸಿದರು. ಜಿಪಂ ಸದಸ್ಯೆ ಗೋಪಿ ಕೆ. ನಾಯ್ಕ್, ತಾಪಂ ಸದಸ್ಯ ಉಮೇಶ್ ನಾಯ್ಕ್, ಗ್ರಾಪಂ ಸದಸ್ಯರಾದ ನಳಿನಿ ಪ್ರದೀಪ್ ರಾವ್, ಬಾಬು ಕೋಟ್ಯಾನ್, ಗಣೇಶ್ ಪೂಜಾರಿ, ಗುರುರಾಜ್ ರಾವ್, ಪಂಚಾಯತ್ ಎಂಜಿನಿಯರ್ ಶಶಿಧರ ನಾಯ್ಕ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಕಡಲ್ಕೊರೆತ ತಡೆಗೆ ಸಭೆ
ಮಣಿಪಾಲ: ಉಡುಪಿ ಜಿಲ್ಲೆಯ ಕಡಲತೀರದಲ್ಲಿ ಕಡಲ್ಕೊರೆತ ತಡೆಗೆ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಅನುದಾನದಡಿ ಶಾಶ್ವತ ಯೋಜನೆ ರೂಪಿಸಲು ಇತ್ತೀಚೆಗೆ ಇಲ್ಲಿನ ಜಿಲ್ಲಾ ಸಂಕೀರ್ಣದಲ್ಲಿ ವಿಸ್ಕೃತ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ಕರಾವಳಿ ಪ್ರದೇಶ ವ್ಯಾಪ್ತಿಯ ಗ್ರಾ.ಪಂ. ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು. ಜಿಲ್ಲಾಧಿಕಾರಿ ಡಾ.ಎಂ. ಟಿ. ರೇಜು, ಯೋಜನೆಯ ಯೂರೋಕನ್ಸಲ್ಟ್ ಕಂಪನಿಯ ಮೋಟ್ ಮ್ಯಾಕ್ ಡೋನಾಲ್ಡ್ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

