ಇತಿಮಿತಿಯ ಹಾಸ್ಯ ಅಪೇಕ್ಷಣೀಯ: ಸೋದೆ ಶ್ರೀ
ಉಡುಪಿ: ಅಡುಗೆಯಲ್ಲಿ ಉಪ್ಪು ಹೆಚ್ಚಾದರೂ ಸಹಿಸಲಿಕ್ಕಾಗುವುದಿಲ್ಲ. ಕಡಿಮೆಯಾದರೂ ರುಚಿಸುವುದಿಲ್ಲ. ಅಂತೆಯೇ ಯಕ್ಷಗಾನದಲ್ಲಿ ಹಾಸ್ಯ ಕೂಡಾ, ಅತಿಯಾದರೆ ಅದು ಅತಿರೇಕವಾಗುತ್ತದೆ, ಇಲ್ಲದಿದ್ದರೇ ಪ್ರಸಂಗ ಸಪ್ಪೆಯಾಗುತ್ತದೆ. ಎಂದಿಗೂ ಹಾಸ್ಯ ಇತಿಮಿತಿಯಲ್ಲಿದ್ದರೇನೇ ಚೆನ್ನ ಎಂದು ಪರ್ಯಾಯ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಭಾನುವಾರ ಇಲ್ಲಿನ ಕೃಷ್ಣ ಮಠ ರಾಜಾಂಗಣದಲ್ಲಿ ವಿಟ್ಲ ಜೋಷಿ ಪ್ರತಿಷ್ಠಾನ ಪರ್ಕಳ ಆಶ್ರಯದಲ್ಲಿ ನಡೆದ ವಿಟ್ಲ ಗೋಪಾಲಕೃಷ್ಣ ಜೋಷಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಅಧ್ಯಕ್ಷತೆ ವಹಿಸಿದ್ದರು. ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಳ ಕ್ಷೇತ್ರಾಧಿಕಾರಿ ಡಾ.ನಿ.ಬೀ. ವಿಜಯ ಬಲ್ಲಾಳ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅಭ್ಯಾಗತರಾಗಿದ್ದರು. ಪ್ರೊ. ವಿಟ್ಲ ಶಂಭು ಶರ್ಮ ಸಂಸ್ಮರಣ ಭಾಷಣ, ಮಣಿಪಾಲ ಎಂಐಟಿ ಪ್ರಾಧ್ಯಾಪಕ ಪ್ರೊ.ಎಸ್.ವಿ. ಉದಯಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಸ್ತ್ರೀ ವೇಷಧಾರಿ ಪಾತಾಳ ವೆಂಕಟರಮಣ ಭಟ್ ಅವರಿಗೆ 2013ನೇ ಸಾಲಿನ ಜೋಷಿ ಪ್ರಶಸ್ತಿ ಹಾಗೂ ಹಾಸ್ಯ ಕಲಾವಿದರಾದ ಕೊಡಕ್ಕಲ್ ಗೋಪಾಲಕೃಷ್ಣ ಭಟ್, ಪೆರ್ವೋಡಿ ನಾರಾಯಣ ಭಟ್, ಮಿಜಾರು ಅಣ್ಣಪ್ಪ ಹಾಗೂ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ಜೋಷಿ ಗೌರವ ಪ್ರಶಸ್ತಿ ನೀಡಿ ಪರ್ಯಾಯ ಶ್ರೀಗಳು ಸನ್ಮಾನಿಸಿ ಹರಸಿದರು.
ಶಿಲ್ಪಾ ಜೋಷಿ ಸ್ವಾಗತಿಸಿದರು. ರವಿ ಜೋಷಿ, ಶ್ರೀಮತಿ ಗೋಪಾಲಕೃಷ್ಣ ಜೋಷಿ, ಡಾ. ಹರೀಶ ಜೋಷಿ ಇದ್ದರು. ವಾದಿರಾಜ ಕಲ್ಲೂರಾಯ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

