ಉಡುಪಿ

ಅಖಿಲ ಕಾನೂನು ವಿದ್ಯಾಲಯ ಒಕ್ಕೂಟ ಉದ್ಘಾಟನೆ

Published On :

ಉಡುಪಿ: ವಿದ್ಯಾರ್ಥಿಗಳೆಲ್ಲರೂ ಅದರಲ್ಲೂ ಢಿಮುಖ್ಯವಾಗಿ ಕಾನೂನು ಕಲಿಯುವ ವಿದ್ಯಾರ್ಥಿಗಳು ಮಾಹಿತಿ ಹಕ್ಕು, ಪಾರದರ್ಶಕ ಅಧಿನಿಯಮ ಕಾನೂನು ಮತ್ತು ಸರ್ಕಾರದ ಆಡಳಿತ ವ್ಯವಸ್ಥೆ ಈ ಮೂರು ವಿಚಾರಗಳನ್ನು ಅರಿತರೆ ಹದಗೆಟ್ಟಿರುವ ಸಮಾಜವನ್ನು ಸರಿಪಡಿಸುವಲ್ಲಿ ಬಹುದೊಡ್ಡ ಕಾಣಿಕೆ ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಹುಬ್ಬಳ್ಳಿಯ ರಾಜ್ಯ ಕಾನೂನು ವಿವಿ ಉಪಕುಲಪತಿ ಜಿ.ಆರ್. ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಅಖಿಲ ಕಾನೂನು ವಿದ್ಯಾಲಯ ಮತ್ತು ಉಡುಪಿಯ ಅಖಿಲ ಜಿಲ್ಲಾ ಕಾನೂನು ವಿದ್ಯಾಲಯ ಒಕ್ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಎಂಬುದು ಭಾರತೀಯ ಅತ್ಯುನ್ನತ ಮೌಲ್ಯವಾಗಿದ್ದು, ಸಂಘಟನೆಗಳು ಪರಸ್ಪರ ಸಹಕಾರ ಮನೋಭಾವ ಮತ್ತು ಸಾಮರಸ್ಯದಿಂದ ಕೂಡಿರಬೇಕು. ಇದರಿಂದ ಶೈಕ್ಷಣಿಕ, ಸಮಾಜಿಕ ಅಭಿವೃದ್ಧಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ. ಸುರೇಶ ಗೌಡ, ರಾಜ್ಯ ವಕೀಲರ ಸಂಘದ ಸದಸ್ಯ ಹರೀಶ್, ಗ್ರಾಪಂ ಒಕ್ಕೂಟ ಉಡುಪಿಯ  ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಚಲನಚಿತ್ರ ನಟ ಸಚಿನ್ ಸುವರ್ಣ, ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ಸದಸ್ಯ ಕಿರಣ್ ವೇದಿಕೆಯಲ್ಲಿದ್ದರು.
ಪ್ರಜ್ವಲ್ ಸ್ವಾಗತಿಸಿದರು. ಶಬೀನಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.