ಸುದ್ದಿ ಸಂಕ್ಷೇಪ
ಸಾರಿಗೆ ಅಧಿಕಾರಿ ಅಧಿಕಾರ ಸ್ವೀಕಾರ
ಮಣಿಪಾಲ: ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಜಿ. ಅರುಣ್ ಕುಮಾರ್ ಸಿಂಗ್ ಜು.19ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಈ ಹಿಂದೆ ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದರು. ಉಡುಪಿಯಲ್ಲಿ ಈ ಹಿಂದೆ ಇದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ಪಿ. ಪದ್ಮಪ್ರಸಾದ್ ಚಾಮರಾಜನಗರಕ್ಕೆ ವರ್ಗಾವಣೆಯಾಗಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿಕೆ
ಕಾರ್ಕಳ: ಪ್ರಾಂಶುಪಾಲರ ವರ್ಗಾವಣೆಗೆ ಒತ್ತಾಯಿಸಿ ಇಲ್ಲಿನ ಪಾಲಿಟೆಕ್ನಿಕ್ ಮಹಿಳಾ ಕಾಲೇಜ್ ವಿದ್ಯಾರ್ಥಿಗಳ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಲಲಿತಾ ಆರ್. ಶೆಟ್ಟಿ ನಿಧನ
ಉಡುಪಿ: ಅಂಕಣಕಾರ, ಲೇಖಕ, ನಿವೃತ್ತ ಆರೋಗ್ಯಾಧಿಕಾರಿ ಬೇಳೂರು ರಾಘವ ಶೆಟ್ಟಿ ಅವರ ಪತ್ನಿ ಕೊಕ್ಕರ್ಣೆ ಬಂಡ್ಸಾಲೆ ಮನೆ ಲಲಿತಾ ಆರ್. ಶೆಟ್ಟಿ (67) ಇವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಸಾಲಿಗ್ರಾಮ ಚಿತ್ರಪಾಡಿಯ ಸ್ವಗೃಹದಲ್ಲಿ ನಿಧನರಾದರು. ಅವರು ಪುತ್ರ ವೈದ್ಯಾಧಿಕಾರಿ ಡಾ.ಕೆ. ಸರ್ವೋತ್ತಮ ಶೆಟ್ಟಿ, ಪುತ್ರಿ ಅಮೆರಿಕಾದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಡಾ. ಶಶಿರೇಖಾ ಎಂ. ಶೆಟ್ಟಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ರಜತ ಕವಚ ಸಮರ್ಪಣೆ
ಕೋಟ: ಇಲ್ಲಿನ ಕೋಟತಟ್ಟು ಪಡುಕರೆ ಶ್ರೀಭಗವತ್ ಭಜನಾ ಮಂದಿರದ ಶ್ರೀರಾಮ, ಲಕ್ಷ್ಮಣ, ಸೀತಾ ಮೂರ್ತಿಗಳಿಗೆ ರು. 1.80 ಲಕ್ಷ ವೆಚ್ಚದಲ್ಲಿ ಊರ- ಪರವೂರ ದಾನಿಗಳಿಂದ ನಿರ್ಮಿಸಲ್ಪಟ್ಟ ರಜತ ಕವಚವನ್ನು ಇತ್ತೀಚೆಗೆ ವೇದಮೂರ್ತಿ ಮಧುಸೂಧನ ನೇತೃತ್ವದಲ್ಲಿ ಉದ್ಯಮಿ ಆನಂದ ಸಿ. ಕುಂದರ್ ಅರ್ಪಿಸಿದರು.
ನಿಟ್ಟೆ: ಅಧ್ಯಾಪಕರ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ
ನಿಟ್ಟೆ: ನಿಟ್ಟೆ ಎನ್.ಎಂ.ಎ.ಎಂ.ಐ.ಟಿ. ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ 'ತಂತ್ರಾಂಶಗಳ ಇತ್ತೀಚಿನ ಬೆಳವಣಿಗೆಗಳು' ವಿಷಯದಲ್ಲಿ ನಡೆಯಲಿರುವ ಆರು ದಿನಗಳ ಅಧ್ಯಾಪಕರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಇತ್ತೀಚೆಗೆ, ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲ ಡಾ. ದಿಲೀಪ್ ಕುಮಾರ್ ಕೆ. ಉದ್ಘಾಟಿಸಿದರು.
ನಿಟ್ಟೆ ಎನ್.ಎಂ.ಎ.ಎಂ., ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀನಿವಾಸ ಪೈ, ಡಾ.ಐ.ಆರ್. ಮಿತ್ತಂತಾಯ, ಗುರುರಾಜ ಉಪಧ್ಯಾಯ, ಎ. ಆದರ್ಶ್ ರೈ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

