ಸಾಧಾರಣ ಮಳೆ
ಉಡುಪಿ: ಜಿಲ್ಲೆಯಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ. ಬೆಳಗ್ಗೆ ಸ್ವಲ್ಪ ಹೊತ್ತು ಸುರಿದ ಮಳೆ ಮಧ್ಯಾಹ್ನದ ನಂತರ ತೀವ್ರತೆ ಕಡಿಮೆಯಾಯಿತು. ಶನಿವಾರ ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಉಡುಪಿ ತಾಲೂಕಿನ ಮೂಡುತೋನ್ಸೆ ಗ್ರಾಮದ ಅಂತಪ್ಪ ಕರ್ಕೇರ ಅವರ ಮನೆ ಕುಸಿದು ರು. 25 ಸಾವಿರ ನಷ್ಟವಾಗಿದೆ. ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಶ್ರೀನಿವಾಸ ಅವರ ಮನೆ ಮಳೆಗೆ ಕುಸಿದು ಸುಮಾರು ರು. 50 ಸಾವಿರ ನಷ್ಟ, ಉಪ್ಪುಂದ ಗ್ರಾಮದ ರಮೇಶ ಖಾರ್ವಿ ಅವರ ಮನೆಯು ಕುಸಿದು ಭಾಗಶಃ ಹಾನಿಯಾಗಿ ರು. 20 ಸಾವಿರ ನಷ್ಟ ಉಂಟಾಗಿದೆ.
ಮಳೆ ವಿವರ: ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ವರೆಗೂ 24 ಗಂಟೆಗಳಲ್ಲಿ ಸರಾಸರಿ 55.93 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 59.2 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 61.6 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 47.0 ಮಿ.ಮೀ. ಮಳೆಯಾಗಿದೆ.
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ಮಂಗಳೂರು: ಹಿರಿಯಡ್ಕ ಕೆ.ವಿ. ವಿದ್ಯುತ್ ಉಪಕೇಂದ್ರದಿಂದ ಹೊರಡುವ 110 ಕೆವಿಎ ಹಾಲಾಡಿ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಪ್ರಯುಕ್ತ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 3 ಗಂಟೆ ವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಪ್ರದೇಶಗಳು: 110 ಕೆ.ವಿ.ಎ. ಮಧುವನ, ಕುಂದಾಪುರ, ನಾವುಂದ, 33 ಕೆವಿಎ ಕಾರ್ಕಳ, ಹೆಬ್ರಿ ಮಾಹೆ ಉಪಕೇಂದ್ರಗಳಿಗೆ ಮತ್ತು ಹಿರಿಯಡ್ಕ ಸ್ಥಾವರದಲ್ಲಿನ ಎಲ್ಲಾ 11 ಕೆವಿಎ ವಿದ್ಯುತ್ ಉಪಕೇಂದ್ರಗಳಿಂದ ಸರಬರಾಜು ಆಗುವ ಎಲ್ಲಾ ಪ್ರದೇಶಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

