ಉಡುಪಿ

ಗ್ರಾಪಂ ಚುನಾವಣೆ: 18ರಲ್ಲಿ ಮತದಾನ, ಒಂದು ಕಡೆ ಇಲ್ಲ

Published On :

ಕುಂದಾಪುರ:  ಕುಂದಾಪುರ ತಾಲೂಕಿನ 16 ಗ್ರಾಮ ಪಂಚಾಯಿತಿಗಳ 18 ಕ್ಷೇತ್ರಗಳಿಗೆ ಮರುಚುನಾವಣೆಗೆ ಸಂಬಂಧಿಸಿ ನಾಮಪತ್ರ ಹಿಂತೆಗೆದುಕೊಳ್ಳುವಿಕೆ ಜು.27ಕ್ಕೆ ಅಂತ್ಯಗೊಂಡಿದ್ದು, ಬದಲಾದ ರಾಜಕೀಯ ವಿದ್ಯಾಮಾನಗಳಲ್ಲಿ ಕೇವಲ ಐದು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.
ಗಂಗೊಳ್ಳಿಯಲ್ಲಿ ಚುನಾವಣೆಗೆ ಸಲ್ಲಿಸಲಾಗಿದ್ದ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಅಭ್ಯರ್ಥಿಗಳೆಲ್ಲರೂ ಚುನಾವಣೆ ತಡೆದಿದ್ದರೆ, ಉಳಿದ 12 ಸ್ಥಾನಗಳಲ್ಲಿ ಒಬ್ಬೊಬ್ಬ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಅವಿರೋಧ ಆಯ್ಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದ್ದ ಜು.24ರಂದು ತಾಲೂಕಿನ 18 ಕ್ಷೇತ್ರಗಳಲ್ಲಿ ಅನುಸೂಚಿತ ಜಾತಿ ಮಹಿಳೆಗೆ 1, ಹಿಂದುಳಿದ ವರ್ಗ ಅ ಮಹಿಳೆಗೆ 2, ಹಿಂದುಳಿದ ಬ ವರ್ಗ ಮಹಿಳೆಗೆ 2 ಹಾಗೂ ಸಾಮಾನ್ಯ 32 ಮತ್ತು ಸಾಮಾನ್ಯ ಮಹಿಳೆ ಸ್ಥಾನಕ್ಕೆ 19 ನಾಮಪತ್ರಗಳು ಸೇರಿದಂತೆ ಒಟ್ಟು ಐವತ್ತೊಂದು ನಾಮಪತ್ರಗಳು ಸ್ವೀಕೃತವಾಗಿವೆ. ಜಡ್ಕಲ್, ಹೇರೂರಿನ ಉಳ್ಳೂರು 1, ಹಕ್ಲಾಡಿಯ ನೂಜಾಡಿ, ಹೆಮ್ಮಾಡಿಯ ದೇವಲ್ಕುಂದ, ಕೆದೂರಿನ ಉಳ್ತೂರು, ಯೆಡ್ತೆರೆ ಗ್ರಾಮ ಪಂಚಾಯಿತಿಯ ಯೆಡ್ತೆರೆ ಕ್ಷೇತ್ರಗಳಲ್ಲಿ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದು ಅವಿರೋಧ ಆಯ್ಕೆ ನಡೆಯುವ ನಿರೀಕ್ಷೆ ಇತ್ತು. ಜು.27ರಂದು ನಾಮಪತ್ರ ಅಂತಿಮಗೊಂಡಿದ್ದು, ಉಪ್ಪುಂದ ಮೂರನೇ ಕ್ಷೇತ್ರ, ನಾಡಾ ಒಂದನೇ ಕ್ಷೇತ್ರ, ಹೆಮ್ಮಾಡಿ ಮೂರನೇ ಕ್ಷೇತ್ರ, ಬಿಜೂರು 1ನೇ ಕ್ಷೇತ್ರ ಹಾಗೂ ಹಟ್ಟಿಯಂಗಡಿಯ ಒಂದನೇ ಕ್ಷೇತ್ರದಲ್ಲಿ ಚುನಾವಣೆಗಳು ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.