ಉಡುಪಿ

'ಯೋಗದಿಂದ ಆಂತರಿಕ ಆರೋಗ್ಯ ವೃದ್ಧಿ'

Published On :

ಕುಂದಾಪುರ: ದೈಹಿಕ ವ್ಯಾಯಾಮ ಆಸನಗಳಿಂದ ಮುಂದುವರಿದು ಮನಸ್ಸು ಬುದ್ದಿಯನ್ನು ನಿಯಂತ್ರಿಸಿ ಕ್ರಿಯೆ ಮತ್ತು ಪ್ರಜ್ಞೆಯನ್ನು ಒಂದೇ ಕಡೆ
ಕೇಂದ್ರೀಕರಿಸಿದಾಗ ಹಿಡಿದ ಕೆಲಸವನ್ನು ತಮ್ಮ ಇಚ್ಛೆಯಂತೆ ಸಾಧಿಸಬಹುದು. ಯೋಗದ ಮೂಲಕ ವಿಕೇಂದ್ರಿತ ವಿಕಾಸವಾದ ಮತ್ತು ಆಧ್ಯಾತ್ಮಿಕ ಸಮಾಜವಾದಗಳಿಂದ ವ್ಯಕಿತ್ವ ವಿಕಾಸಗೊಂಡು, ಸಮಾಜ, ರಾಷ್ಟ್ರ ಹಾಗೂ ಜಗತ್ತಿನ ಏಳ್ಗೆಯಲ್ಲಿ ಮುನ್ನಡೆಯಿರಿ ಎಂದು ಉಡುಪಿ ಪತಂಜಲಿ ಯೋಗ ಶಿಕ್ಷಕ ಸುರೇಶ್ ಭಕ್ತ ಹೇಳಿದರು.
ಅವರು ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ್ ಟ್ರಸ್ಟ್ ಉಡುಪಿ- ಕುಂದಾಪುರ. ಹಾಗೂ ಚೇತನಾ ಕಲಾರಂಗ, ರೋಟರಿ ಕ್ಲಬ್ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಕೋಟೇಶ್ವರ ಸರ್ಕಾರಿ ಮಾದರಿ ಹಿ.ಪ್ರಾ. ಶಾಲೆಯ ಮಹಾಲಕ್ಷ್ಮೀ ಮದ್ವರಾಯ ಸಭಾಭವನದಲ್ಲಿ ನಡೆದ ಉಚಿತ ಪ್ರಾಣಾಯೋಗ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಬೆಂಗಳೂರು ಪತಂಜಲಿ ಯೋಗ ಶಿಕ್ಷಕ ಶುಗುರೇಶ್ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಾಣಾಯಾಮದಿಂದ ಮನಸ್ಸು ಬುದ್ಧಿಯನ್ನು ನಿಯಂತ್ರಿಸಿ ಏಕಾಗ್ರತೆ ಮೂಡಿಸುವ ಜ್ಞಾನ ಸಂಪಾದಿಸುವುದಲ್ಲದೆ ಯೋಗ ಒಂದು ಜೀವನ ಪದ್ಧತಿಯಾಗಿದ್ದು ರೋಗಗಳ ಮೂಲ ಕಾರಣವನ್ನು ನಿರ್ಮೂಲನೆ ಮಾಡಿ ನಮಗೆ ಒಳಗಿನಿಂದ ಆರೋಗ್ಯ ಪ್ರಧಾನ ಮಾಡುತ್ತದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕಾಯಿಲೆಗಳಿಗೆ ಆಯುರ್ವೇದಿಕ್, ಗಿಡಮೂಲಿಕೆಗಳಿಂದ ಪರಿಹಾರ ನೀಡಿದರು. ಕೋಟಿಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಪ್ರಭಾಕರ್ ಶೆಟ್ಟಿ ಯೋಗ ಶಿಬಿರ ಉದ್ಘಾಟಿಸಿದರು.
ಜಿಲ್ಲಾ ಭಾರತ್ ಸ್ವಾಭಿಮಾನ್ ಟ್ರಸ್ಟ್ ಅಧ್ಯಕ್ಷ ಶಿವರಾಮ ಶೆಟ್ಟಿ, ಅಜಿತ್ ಕುಮಾರ್, ಉದಯ ಕುಮಾರ್, ಕೃಷಿ ಭಾರತ್ ಅಧ್ಯಕ್ಷ ಪ್ರಕಾಶ್ ಉಪಾಧ್ಯಾಯ, ಜಯಶೀಲ, ಉದ್ಯಮಿ ಸುರೇಶ್ ಬಟ್ಟಿನ್ ಇದ್ದರು. ಸುಧಾಕರ್ ವಕ್ವಾಡಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.