ಅಸ್ಪೃಶ್ಯತೆ ಆಚರಣೆ ವಿರುದ್ಧ ದೂರು
ಉಡುಪಿ: ದೇಶದ್ಯಾಂತ ಅಸ್ಪೃಶ್ಯತೆ ನಿಷೇಧವಿದ್ದರೂ, ಉಡುಪಿಯಲ್ಲಿ ಈ ಅಮಾನವೀಯ ಆಚರಣೆಯ ವಿರುದ್ಧ ದೂರೊಂದು ದಾಖಲಾಗಿದೆ. ಇಲ್ಲಿನ ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಸಾಕಮ್ಮ ಎಂಬವರ ಮದುವೆ ವೇಳೆ ಪುರೋಹಿತರು, ಇತರರು ಅಸ್ಪೃಶ್ಯತೆ ಆಚರಿಸಿದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಕೇಸಾಗಿದೆ.
ಘಟನೆ ವಿವರ: ಸಾಕಮ್ಮ ಅವರ ವಿವಾಹಕ್ಕೆ ನೆರೆಯ ತ್ರಾಸಿ ಗ್ರಾಪಂ ವ್ಯಾಪ್ತಿಯ ಅಣ್ಣಪ್ಪಯ್ಯ ಸಭಾ ಭವನವನ್ನು ಕಾಯ್ದಿರಿಸಲಾಗಿತ್ತು. ಸಭಾಭವನದ ಮಾಲೀಕರಿಗೆ 42,000 ಮುಂಗಡವನ್ನೂ ನೀಡಲಾಗಿತ್ತು. ಬುಧವಾರ ಸಭಾಭವನಕ್ಕೆ ಬಂದಿದ್ದರು. ಈ ವೇಳೆ ಅವರು ಕೊರಗ ಜಾತಿಯ ಸಂಪ್ರದಾಯದಂತೆ ಮದುವೆಗೆ ವಾದ್ಯದ ಬದಲು ಡೋಲು, ಚಂಡೆ ಬಾರಿಸಿದರು. ಇದನ್ನು ಗಮನಿಸಿದ ಪುರೋಹಿತರು, ಸಭಾಭವನದ ಸ್ವಚ್ಛತೆಯ ಮಹಿಳೆಯರು, 'ಇದು ಕೊರಗರ ಮದುವೆ. ಈ ಮದುವೆಯ ಕಾರ್ಯ ನಾವು ಮಾಡುವುದಿಲ್ಲ, ಅವರು ಉಂಡ ಬಾಳೆಲೆಯನ್ನು ನಾವು ತೆಗೆಯುದಿಲ್ಲ' ಎಂದು ಗಣ್ಯರ ಎದುರಿನಲ್ಲಿ ಜಾತಿ ನಿಂದನೆ ಮಾಡಿದರು. ಬಳಿಕ, ಮದುವೆ ಮಾಡಿಸದೆ ಸಭಾಭವನದಿಂದ ಹೊರಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

