ಕೊಂಕಣಿ ಆರೋಗ್ಯ ಕಾರ್ಡ್: ಅರ್ಜಿ ಆಹ್ವಾನ
ಕುಂದಾಪುರ: ಕಳೆದ ವರ್ಷ ಗಂಗೊಳ್ಳಿ ಜಿಎಸ್ಬಿ ಸಮಾಜ ವತಿಯಿಂದ ಸಮಾಜ ಬಾಂಧವರಿಗೆ ನೀಡಲಾಗಿರುವ ಕೊಂಕಣಿ ಆರೋಗ್ಯ ಕಾರ್ಡ್ ನವೀಕರಿಸಲು ಹಾಗೂ ಹೊಸ ಕಾರ್ಡ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಜೊತೆ ತಮ್ಮ ಕುಟುಂಬದ ಸದಸ್ಯರ ಸಂಖ್ಯೆ ನಮೂದಿಸಿ ರಿಯಾಯಿತಿ ದರದ ಶುಲ್ಕ ಪಾವತಿಸಬೇಕು. ಹಿಂದಿನ ವರ್ಷದ ಕಾರ್ಡ್ ಇರುವವರು ಅರ್ಜಿ ಜೊತೆ ಹಿಂದಿನ ಕಾರ್ಡ್ನ ಜೆರಾಕ್ಸ್ ಪ್ರತಿ, ಹೊಸ ಕಾರ್ಡ್ ಮಾಡುವವರು ಕುಟುಂಬದ ಮುಖ್ಯಸ್ಥರ ಪಡಿತರ ಚೀಟಿ ಅಥವಾ ಮತದಾರರ ಗುರುತು ಚೀಟಿಯ ಪ್ರತಿಯನ್ನು ಅರ್ಜಿಯೊಂದಿಗೆ ನೀಡಬೇಕು. ಗಂಗೊಳ್ಳಿ ಜಿಎಸ್ಬಿ ಸಮಾಜ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಮರವಂತೆ ಮೊದಲಾದ ಕಡೆಗಳ ಜಿಎಸ್ಬಿ ಸಮಾಜ ಬಾಂಧವರು ಅರ್ಜಿಗಳನ್ನು ಬಿ.ರಾಘವೇಂದ್ರ ಪೈ (ಸಾನಿಧ್ಯ ಬುಕ್ ಹೌಸ್, ಕೆನರಾ ಬ್ಯಾಂಕ್ ಎದುರು) ಅವರಿಂದ ಪಡೆದು ಅಗತ್ಯ ದಾಖಲೆ ಹಾಗೂ ಶುಲ್ಕದೊಂದಿಗೆ ಜೂ.30ರೊಳಗೆ ಹಿಂತಿರುಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬಿ.ರಾಘವೇಂದ್ರ ಪೈ (9886880474) ಅಥವಾ ಬಿ.ಗಣೇಶ ಶೆಣೈ (9008979520) ಅವರನ್ನು ಸಂಪರ್ಕಿಸಬಹುದು ಎಂದು ಗಂಗೊಳ್ಳಿ ಜಿಎಸ್ಬಿ ಸಮಾಜದ ಪ್ರಕಟಣೆ ತಿಳಿಸಿದೆ.
ಕಥೆ, ಕವನಕ್ಕೆ
ಅರ್ಜಿ ಆಹ್ವಾನ
ಮಂಗಳೂರು: ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಹಿತ್ಯ ಗೋಷ್ಠಿ, ಕಥೆ, ಕವನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಉಡುಪಿ, ಕಾಸರಗೋಡು, ದ.ಕ. ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ವರಚಿತ ಕವನ, ಕಥೆಗಳನ್ನು ಅಂಚೆ ಕಾರ್ಡಿನಲ್ಲಿ ಬರೆದು ಬಿ. ಶ್ರೀನಿವಾಸ ರಾವ್, ಕಲ್ಲಾಪು 'ಬಿ' ಮನೆ, ಉರ್ವ ಲಾಂಗ್ ಲೇನ್, ಉರ್ವ ಇಲ್ಲಿಗೆ ಕಳುಹಿಸಬಹುದು. ಜೂ. 30 ಕೊನೆ ದಿನ. ಆಗಸ್ಟ್ ಕೊನೆಯ ವಾರದಲ್ಲಿ ಮಂಗಳೂರಿನಲ್ಲಿ ನಡೆಯುವ 20ನೇ ಮಕ್ಕಳ ಧ್ವನಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 0824-2457971 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

