ಉಡುಪಿ

ನಿಡ್ಡೋಡಿ ವಿದ್ಯುತ್ ಸ್ಥಾವರ ವಿರುದ್ಧ ಜನತೆ ಹೋರಾಡಿದರೆ ಬೆಂಬಲಿಸುವೆ

Published On :

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ನಿಡ್ಡೋಡಿ ಗ್ರಾಮದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಜನಜೀವನದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸ್ಥಳೀಯ ಜನತೆ ಈ ಸ್ಥಾವರದ ವಿರುದ್ಧ ಹೋರಾಟ ನಡೆಸಬೇಕು ಎಂದು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶುಕ್ರವಾರ ಪೇಜಾವರ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಜನರು ಹೋರಾಟ ನಡೆಸಿದರೆ ಅದಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಆದರೆ ಹೋರಾಟವನ್ನು ನಾನೇ ಸಂಘಟಿಸುವುದು ಸಾಧ್ಯವಿಲ್ಲ. ಈ ಸ್ಥಾವರದ ಸ್ಥಾಪನೆಗೆ ಕೇಂದ್ರ, ರಾಜ್ಯ, ಕಾಂಗ್ರೆಸ್, ಬಿಜೆಪಿ ಎಂದು ದೂಷಿಸುವುದಕ್ಕಿಂತ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು. ಇದು ಜನರ ಜೀವನದ ಪ್ರಶ್ನೆಯಾದ್ದರಿಂದ ರಾಜಕೀಯಕರಣಗೊಳಿಸುವುದು ಬೇಡ. ಮಂಗಳೂರಿನ ವಿಶೇಷ ಆರ್ಥಿಕ ವಲಯದ ವಿರುದ್ಧ ಮಾತನಾಡಿದಾಗ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ನನ್ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ನಾನು ನನ್ನ ವಿರೋಧ ವ್ಯಕ್ತಪಡಿಸಿದ್ದೆ. ಈಗಲೂ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿಷಯದಲ್ಲಿಯೂ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಎಂದರು.
ಅಷ್ಟ ಮಂಗಲ ಪ್ರಶ್ನೆ ವದಂತಿ: ಉಡುಪಿಯಲ್ಲಿ ನಡೆಸಲಾದ ಅಷ್ಟಮಂಗಲ ಪ್ರಶ್ನೆಯಲ್ಲಿ ಉಡುಪಿಗೆ ಆಪತ್ತು ಇದೆ ಎಂಬ ವದಂತಿ ಸುಳ್ಳು. ಈ ಅಷ್ಟ ಮಂಗಲ ಕಾರ್ಯಕ್ರಮಕ್ಕೂ ಕೃಷ್ಣ ಮಠಕ್ಕೂ ಅಥವಾ ಅಷ್ಟ ಮಠಗಳಿಗೂ ಯಾವುದೇ ಸಂಬಂಧ ಇಲ್ಲ. ಪುತ್ತಿಗೆ ಮಠದ ಶ್ರೀಗಳು ತಮ್ಮ ಆಡಳಿತದಲ್ಲಿರುವ ಅನಂತೇಶ್ವರ ದೇವಾಲಯದ ಜೀರ್ಣೋದ್ಧಾರದ ಬಗ್ಗೆ ನನ್ನ ಗಮನಕ್ಕೆ ತಂದು ಈ ಅಷ್ಟಮಂಗಲ ಪ್ರಶ್ನೆ ಇರಿಸಿದ್ದರು. ಆದರೆ ಈ ಪ್ರಶ್ನೆಯ ಸಂದರ್ಭದಲ್ಲಿ ಏನೇನೂ ವಿಷಯಗಳು ತಿಳಿದು ಬಂದಿದೆ ಎನ್ನುವುದು ನನಗೆ ಗೊತ್ತಿಲ್ಲ. ಸಾಮಾನ್ಯವಾಗಿ ಅಷ್ಟ ಮಂಗಲ ಪ್ರಶ್ನೆಯಲ್ಲಿ ಅನೇಕ ದೋಷಗಳ ಬಗ್ಗೆ ಮಾಹಿತಿ ಸಿಗುತ್ತದೆ ಮತ್ತು ಅವೆಲ್ಲಕ್ಕೂ ಪರಿಹಾರಗಳೂ ಇರುತ್ತವೆ. ಉಡುಪಿಯಲ್ಲಿ ನಡೆದ ಅಷ್ಟ ಮಂಗಲ ಕಾರ್ಯಕ್ರಮದಲ್ಲಿಯೂ ಏನಾದರೂ ದೋಷಗಳು ಕಂಡು ಬಂದರೆ ಖಂಡಿತಾ ಪರಿಹಾರಗಳನ್ನು ಮಾಡಲಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.