ಬಿಜೆಪಿ ಕಳೆದ ಬಾರಿಯ ಪ್ರಣಾಳಿಕೆ ಈಡೇರಿದೆ; ಭಟ್
ಉಡುಪಿ: ಕಳೆದ ನಗರಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿದ್ದ ಮಣಿಪಾಲ-ಕಲ್ಯಾಣಪುರ- ಆದಿಉಡುಪಿ-ಮಲ್ಪೆ ಪ್ರದೇಶಗಳ ಒಳಚರಂಡಿ ಜೋಡಣೆ ಮತ್ತು ಮಲ್ಪೆ-ಪಡುಕರೆ ಸೇತುವೆ ಕಾಮಗಾರಿಗಳನ್ನು ಹೊರತುಪಡಿಸಿ, ಇಳಿದೆಲ್ಲಾ ಘೋಷಣೆಗಳನ್ನು ಈಡೇರಿಸಲಾಗಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಶುಕ್ರವಾರ ಈ ಬಾರಿಯ ನಗರಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅಭಿವೃದ್ಧಿ ಕಾಮಗಾರಿ: ಉಡುಪಿ ನಗರಸಭೆಯಲ್ಲಿ ಕಳೆದ 5 ವರ್ಷಗಳಲ್ಲಿ ರು. 163 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಾಗಿವೆ. ಅದರಲ್ಲಿ ರಾಜ್ಯ ಸರ್ಕಾರದ ಹಣಕಾಸು ಸಮಿತಿಯಿಂದ ರು. 136 ಕೋಟಿಗಳು ಬಂದಿದ್ದರೇ ಕೇಂದ್ರ ಸರ್ಕಾರದ 13ನೇ ಹಣಕಾಸು ಯೋಜನೆಯಿಂದ ಕೇವಲ ರು. 10 ಕೋಟಿ ಬಂದಿದೆ. ಉಳಿದ ರು. 28 ಕೋಟಿಗಳನ್ನು ನಗರಸಭೆ ಸ್ವಂತ ಆದಾಯವಾಗಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್, ಪಕ್ಷದ ಮುಖಂಡರಾದ ರಾಘವೇಂದ್ರ ಕಿಣಿ, ಮಹೋಹರ ಕಲ್ಮಾಡಿ ಇದ್ದರು.
ಪ್ರಣಾಳಿಕೆ ಮುಖ್ಯಾಂಶ...
ಕಳೆದ ಬಾರಿ ಆಗದ ಒಳಚರಂಡಿ ಯೋಜನೆ, ಆದಿಉಡುಪಿ-ಮಲ್ಪೆ ದ್ವಿಪಥ ರಸ್ತೆ, ಮಣಿಪಾಲ-ಆತ್ರಾಡಿ ಚತುಷ್ಪಥ ರಸ್ತೆ, ಮಣಿಪಾಲ-ಜಿಲ್ಲಾಧಿಕಾರಿ ಕಚೇರಿ ಚತುಷ್ಪಥ ರಸ್ತೆ, ಬೀಡಿನಗುಡ್ಡೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ, ಬಯಲು ರಂಗಮಂದಿರ ನಿರ್ಮಾಣ, ನಗರದಲ್ಲಿ ಹೈಟೆಕ್ ಬಸ್ ನಿಲ್ದಾಣಗಳ ನಿರ್ಮಾಣ, ನಗರಸಭೆಯಲ್ಲಿ 24 ಗಂಟೆ ಸಹಾಯವಾಣಿ, ಮಣಿಪಾಲ-ಕೈಗಾರಿಕಾ ಪ್ರದೇಶ ಚತುಷ್ಪಥ ರಸ್ತೆ, ನಗರದಲ್ಲಿ ವಾಹನ ನಿಲುಗಡೆಗೆ 4 ಮಹಡಿಗಳ ಕಟ್ಟಡ, ಮಲ್ಪೆ-ಪಡುಕರೆ ಸೇತುವೆ, ಮೂಡುಪೆರಂಪಳ್ಳಿ-ಕೊಳಲಗಿರಿ ಸೇತುವೆ ಇತ್ಯಾದಿ ಘೋಷಣೆಗಳು ಈ ಬಾರಿಯ ಪ್ರಣಾಳಿಕೆಯ ಮುಖ್ಯಾಂಶಗಳಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

