ಉಡುಪಿ

ರೇಲ್ವೆ ಬಜೆಟ್ ಸೌಕರ್ಯಗಳ ಮಾರ್ಪಾಡು: ಸಂಸದಗೆ ಮನವಿ

Published On :

ಕುಂದಾಪುರ: ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ರೇಲ್ವೆ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗೆ ಕೊಡಮಾಡಿದ ಸೌಕರ್ಯಗಳಲ್ಲಿ ಮಾರ್ಪಾಟು ಮಾಡುವಂತೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹಾಗೂ ಮಂಗಳೂರು ಪಶ್ಚಿಮ ರೇಲ್ವೇ ಯಾತ್ರಿಕರ ಸಂಘದ ನಿಯೋಗ ಸೋಮವಾರ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಸೋಮವಾರ ಮುಂಜಾನೆ ಸಂಸದರ ಮನೆಗೆ ಭೇಟಿ ನೀಡಿದ ಸಮಿತಿಯ ಸದಸ್ಯರು, ಭಟ್ಕಳ ತೋಕೂರು ಡಿಎಂಯು ರೈಲನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಬೇಕು. ಈಗಾಗಲೇ ಮಂಗಳೂರು ಕೇಂದ್ರ ನಿಲ್ದಾಣದಲ್ಲಿ ರೇಲ್ವೇ ಸಂಚಾರಿ ದಟ್ಟಣೆ ಹೆಚ್ಚಾಗಿದ್ದು, ಈಗಿನ ಮೂರು ಪ್ಲಾಟ್ ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಇನ್ನೂ ಹೆಚ್ಚುವರಿಯಾಗಿ ಎರಡು ಹೊಸ ಪ್ಲಾಟ್‌ಫಾರಂ ನಿರ್ಮಾಣ ಮಾಡಬೇಕು, ಈಗಾಗಲೇ ಘೋಷಣೆಯಾದ ಮಂಗಳೂರು- ಬೆಂಗಳೂರು ರೈಲನ್ನು ಹಾಸನ- ಸಕಲೇಶಪುರ ಮಾರ್ಗವಾಗಿ ಓಡಿಸಬೇಕು ಎಂಬು ಮೂರಂಶಗಳ ಮನವಿಯನ್ನು ನಿಯೋಗ ಸಂಸದರಿಗೆ ಸಲ್ಲಿಸಿದ್ದು, ಮುಂಗಡಪತ್ರದ ಅನುಮೋದನೆಗೆ ಮುಂಚಿತವಾಗಿ ಈ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.
ಅಲ್ಲದೆ, ಕುಂದಾಪುರ ರೇಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು, ರೇಲ್ವೇ ಬಜೆಟ್‌ನಲ್ಲಿ ಘೋಷಣೆಯಾದ ಮಂಗಳೂರು- ಮಡಗಾಂವ್ ಇಂಟರ್‌ಸಿಟಿಗೆ ಬೆಂಗಳೂರು ರಾತ್ರಿ ಸಮಚಾರದ ರೈಲು ನಿಲ್ಲುವ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸುವುದು ಸೇರಿದಂತೆ ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್ಟಿ) (ಟರ್ಮಿನಲ್ ಅಲ್ಲ) ರೈಲಿಗೆ ಕುಂದಾಪುರದಲ್ಲಿ ನಿಲುಗಡೆ ಘೋಷಿಸಬೇಕು ಎಂಬುದಾಗಿ ಸಂಸದರನ್ನು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಪುತ್ರನ್, ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ, ಪದ್ಮನಾಭ ಶೆಣೈ, ಗಜೇಂದ್ರ ಶೆಟ್ಟಿ, ಕುಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಕಿಶನ್ ಕುಮಾರ್ ಕೆಂಚನೂರು, ಚಂದ್ರಶೇಖರ ತಲ್ಲೂರು, ಉದಯ ಭಂಡಾರ್ಕರ್, ವಿವೇಕ್ ನಾಯಕ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.