ಉಡುಪಿ

10,11ರಂದು ಬೃಹತ್ ಶಿವಲಿಂಗ ದರ್ಶನ

Published On :

ಉಡುಪಿ: ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ಪ್ರಯುಕ್ತ ಬ್ರಹ್ಮಕುಮಾರಿಸ್ ಇದರ ಮಣಿಪಾಲ ಶಾಖೆ ವತಿಯಿಂದ ಮಾ.10 ಮತ್ತು 11ರಂದು ಬೃಹತ್ ಶಿವಲಿಂಗ ದರ್ಶನ, ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಮತ್ತು ಈಶ್ವರಾನುಭೂತಿ ಎಂಬ 3ಡಿ ವಿಡಿಯೋ ಕಾರ್ಯಕ್ರಮವನ್ನು ಮಣಿಪಾಲ ಶಾಖೆಯ ಆವರಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು 10ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜನರಿಗೆ ಪರಮಾತ್ಮನ ಶಿವನ ಅವತರಣೆಯ ಅದ್ಭುತ ರಹಸ್ಯ, ಜಾಗರಣೆ, ಉಪವಾಸ ಹಾಗೂ ಇನ್ನಿತರ ಆಚರಣೆಗಳ ಅರ್ಥವನ್ನು ತಿಳಿಸುವುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

15ರಂದು ಕಾಡ್ಯಾವ ನೆನಪು ಪುಸ್ತಕ ಬಿಡುಗಡೆ
ಉಡುಪಿ:
ಇಲ್ಲಿನ ಕಿದಿಯೂರು ಹೋಟೇಲಿನ ತುದಿ ಮಾಳಿಗೆಯಲ್ಲಿ ಮಾ.15ರಂದು ಸಂಜೆ 4.30ಕ್ಕೆ ಕವಿ ಮೇಟಿ ಮುದಿಯಪ್ಪ ಅವರ ಕಥಾಸಂಕಲನ ಕಾಡ್ಯಾವ ನೆನಪು ಪುಸ್ತಕ ಬಿಡುಗಡೆ ಸಮಾರಂಭ ನೆರವೇರಲಿದೆ. ಮಾಜಿ ಶಾಸಕ ಯು.ಆರ್. ಸಭಾಪತಿ ಪುಸ್ತಕ ಲೋಕರ್ಪಣೆ ಮಾಡಲಿರುವ ಕಾರ್ಯಕ್ರಮದಲ್ಲಿ, ಸಾಹಿತಿ ಗಣನಾಥ ಎಕ್ಕಾರು ಪುಸ್ತಕ ಪರಿಚಯ ಮಾಡಿಕೊಡಲಿರುವರು. ಕಸಾಪ ಮಾಜಿ ಅಧ್ಯಕ್ಷ ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆ ವಹಿಸಲಿದ್ದು, ಉದ್ಯಮಿ ಸುರೇಶ್ ಪ್ರಭು, ಲೇಖಕ ಮೇಟಿ ಮುದಿಯಪ್ಪ ಉಪಸ್ಥಿತರಿರುವರು.

ರೆಡ್‌ಕ್ರಾಸ್‌ನಿಂದ ವೈದ್ಯಕೀಯ ನೆರವು
ಉಡುಪಿ:
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ, ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಕರ್ಜೆ ಗ್ರಾಮದ ಬಡಕುಟುಂಬದ ನಿವಾಸಿ ಆಶಾ ಅವರ ಚಿಕಿತ್ಸೆಗೆ ರು. 10 ಸಾವಿರ ದೇಣಿಗೆ ಇತ್ತೀಚೆಗೆ ನೀಡಲಾಯಿತು.

ಶರಣ್ಯಾ ರಾವ್‌ಗೆ ವಿಶಿಷ್ಟ ಶ್ರೇಣಿ
ಉಡುಪಿ:
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಕ್ಟೋಬರ್ ತಿಂಗಳಲ್ಲಿ ನಡೆಸಿದ ಶಾಸ್ತ್ರೀಯ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉಡುಪಿಯ ಬಾಲಕಿಯರ ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗದ 8ನೇ ತರಗತಿ ವಿದ್ಯಾರ್ಥಿನಿ ಶರಣ್ಯ ರಾವ್ ಅವರು ಶೇ.91.5 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಅವರು ವಾರಿಜಾಕ್ಷಿ ಅಂಬಲಪಾಡಿ ಅವರ ಶಿಷ್ಯೆ ಹಾಗೂ ಶ್ರೀನಿವಾಸ ಪುತ್ತೂರು-ಶ್ರೀಲತಾ ದಂಪತಿ ಪುತ್ರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.