ಅಡಿಗರು ಸಮರ್ಥ ಕಾದಂಬರಿಕಾರ: ಡಾ. ಸರ್ಫ್ರಾಜ್
ಕಾಂತಾವರ: ನೀತಿಯ ಕಲ್ಪನೆ ಬಿಟ್ಟು ಯೋಚಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ನೈತಿಕತೆಯನ್ನೇ ಕೇಂದ್ರವಾಗಿಟ್ಟುಕೊಂಡು 1955ರಲ್ಲಿ ಗೋಪಾಲಕೃಷ್ಣ ಅಡಿಗರು ಬರೆದ “@«Û¢æ’ ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸೇರಿ ಜನಪ್ರಿಯವಾಗಿದೆ. ಆದುದರಿಂದ ಅಡಿಗರು ಕವಿಯಷ್ಟೇ ಅಲ್ಲ ಸಮರ್ಥ ಕಾದಂಬರಿಕಾರ ಅನ್ನುವುದನ್ನೂ ನಿರೂಪಿಸಿದ್ದಾರೆ ಎಂದು ಸಾಹಿತಿ, ಉಪನ್ಯಾಸಕ ಡಾ. ಸರ್ಫ್ರಾಜ್ ಚಂದ್ರಗುತ್ತಿ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಕಾಂತಾವರ ಕನ್ನಡ ಸಂಘದ “«ÚÈÚß½ ಕನ್ನಡ «ÚÈÚß½¥Úß’ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಅಡಿಗರ “@«Û¢æ’ ಕಾದಂಬರಿ ಕುರಿತು ಮಾತನಾಡಿ, ಗಾಂಧಿ ಕಾಲದ ಲೇಖಕರಾಗಿ ಚಳವಳಿಗಳಲ್ಲೂ ಭಾಗವಹಿಸಿದ್ದ ಅಡಿಗರನ್ನು ಪೂರ್ತಿ ಅರ್ಥ ಮಾಡಿಕೊಳ್ಳದವರು ಮಾತ್ರ ಅವರನ್ನು ಸನಾತನವಾದಿಗಳು ಎಂದು ಹೇಳುತ್ತಾರೆ. ಆ ಮಾತು ಸುಳ್ಳು ಅನ್ನುವುದನ್ನು ಈ ಕಾದಂಬರಿ ಪಾತ್ರ ಸಾಬೀತುಪಡಿಸುತ್ತದೆ ಎಂದರು.
“@«Û¢æ’ ಕಾದಂಬರಿ ಮತಧರ್ಮದ ಪರವಾಗಿರದೆ ಧರ್ಮದ ಪರವಾಗಿದೆ. ಧರ್ಮಕ್ಕೆ ಕಳಂಕ ತರುವ ಮತಧರ್ಮದ ಬೋಳೇತನ ಅವರು ಇಲ್ಲಿ ಗೇಲಿ ಮಾಡುವುದಲ್ಲದೆ ತಮ್ಮ ಕಥೆ, ಕಾದಂಬರಿ, ಕಾವ್ಯಗಳಲ್ಲೂ ಕಂದಾಚಾರವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಒಬ್ಬರ ಕಷ್ಟಕ್ಕೆ ಇನ್ನೊಬ್ಬರ ಕಾಲೆಳೆಯದೆ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಕೈ ಹಿಡಿದು ನೆರವಾಗಿ ಅನ್ನುವ ಸಂದೇಶವನ್ನು ನೀಡುವ ಅಡಿಗರು ಎಲ್ಲಿ ಜೀವದಯೆ ಇದೆಯೋ ಅಲ್ಲಿ ದೇವರಿದ್ದಾನೆ ಎಂಬ ವಾದದಲ್ಲಿ ನಂಬಿಕೆಯುಳ್ಳವರಾಗಿದ್ದರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

