ಉಡುಪಿ

ಸಾಲವನ್ನು ಅನ್ಯ ಉದ್ದೇಶಗಳಿಗೆ ಬಳಸಬೇಡಿ: ಶ್ಯಾಮ್ ಕಿಶೋರ್

Published On :

ಮಣಿಪಾಲ: ಪ್ರಧಾನ ಮಂತ್ರಿ ಉದ್ಯೋಗ ನಿರ್ಮಾಣ ಯೋಜನೆಯ ಫಲಾನುಭವಿಗಳು ತಾವು ಪಡೆದಿರುವ ಸಾಲವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳದೆ ಉದ್ದೇಶಿತ ಉದ್ಯಮಗಳಲ್ಲಿಯೇ ತೊಡಗಿಸಬೇಕು. ತಮ್ಮ ಗಳಿಕೆಯನ್ನು ಅದೇ ಉದ್ಯಮಗಳಲ್ಲಿ ತೊಡಗಿಸಿ ಅವುಗಳನ್ನು ಇನ್ನಷ್ಟು ವಿಸ್ತರಿಸುವ ಗುರಿ ಹೊಂದಿರಬೇಕು ಎಂದು ಸಿಂಡಿಕೇಟ್ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ಶ್ಯಾಮ್ ಕಿಶೋರ್ ಪಾಂಡೆ ಹೇಳಿದ್ದಾರೆ.
ಸಿಂಡ್ ಆರ್ ಸಿಟಿ ಮಣಿಪಾಲದಲ್ಲಿ ಆಯೋಜಿಸಲಾದ ಪ್ರಧಾನಮಂತ್ರಿ ಉದ್ಯೋಗ ನಿರ್ಮಾಣ ಯೋಜನೆಯ ಫಲಾನುಭವಿಗಳ ಉದ್ಯಮಶೀಲತೆ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಶಿಬಿರಾ ರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ನೇಮಿಸಿಕೊಂಡಿರುವ ಕೆಲಸಗಾರರ ಯೋಗ ಕ್ಷೇಮದ ಬಗ್ಗೆ ಕಾಳಜಿ, ಪ್ರಾಮಾಣಿಕತೆ, ಒಳ್ಳೆಯ ನಡೆ ನುಡಿಗಳಿಂದ ತಾಳ್ಮೆ ಹಾಗೂ ಸಹನೆಗಳಿಂದ ಯಶಸ್ವಿ ಉದ್ಯಮಶೀಲರಾಗಿ ತನ್ಮೂಲಕ ರಾಷ್ಟ್ರದ ಪ್ರಗತಿಗೆ ಕಾರಣರಾಗಬೇಕು ಎಂದರು.
ಪಡೆಯುವ ಆರ್ಥಿಕ ನೆರವು ಬೃಹತ್ ಪ್ರಮಾಣದಲ್ಲಿದ್ದು, ಅದರ ಸದ್ಬಳಕೆಯಾಗಬೇಕು. ಉದ್ಯಮದ ನಿರ್ವಹಣೆಯ ಬಗ್ಗೆ ನಿಗಾ ವಹಿಸಲೇ ಬೇಕು. ಕಠಿಣ ಪರಿಶ್ರಮದಿಂದ ಕೋಟ್ಯಧಿಪತಿಯಾಗಲು ಸಾಧ್ಯ ಎಂದು ಅವರು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಮಂಜುನಾಥ ಪಿ. ಉಪಾಧ್ಯ ಸ್ವಾಗತಿಸಿ, ತರಬೇತಿಯ ಹಿನ್ನೋಟ ನೀಡಿದರು. ಶ್ರೇಯಾ ವಂದಿಸಿದರು. ಆಶಾ ತೋಪಿಲ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.