ಉಡುಪಿ

ಶಿರ್ವ ಮಹಾಲಸಾ ನಾರಾಯಣಿ ದೇವಸ್ಥಾನ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ

Published On :

ಉಡುಪಿ: ಶ್ರೀನೀವಾಸ ದೇವರ ಕಲ್ಯಾಣೋತ್ಸವ ಮಾಡುವುದರಿಂದ ಸಮಸ್ತ ಸಮಾಜದ ಕಲ್ಯಾಣವಾಗುತ್ತದೆ. ಉತ್ತಮ ಆರೋಗ್ಯ, ಗುಣ, ಸಂಪನ್ನತೆ, ಸಾತ್ವಿಕತೆ ನಿರ್ಮಾಣವಾಗಿ ಲೋಕ ಕಲ್ಯಾಣವಾಗುತ್ತದೆ ಎಂದು ಶ್ರೀ ಕಾಶಿಮಠ ಸಂಸ್ಥಾನದ ಕಿರಿಯ ಯತಿ ಶ್ರೀಸಂಯಮೀಂದ್ರತೀರ್ಥ ಸ್ವಾಮೀಜಿ ನುಡಿದರು.
ಅವರು ಇತ್ತೀಚಿಗೆ ಶಿರ್ವ ಕಾಶಿಮಠ ಶ್ರೀಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡು ಶ್ರೀಗಳಿಂದ ಲೋಕಾರ್ಪಣೆಗೊಂಡ ಶ್ರೀಮಹಾಲಸಾ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನವಿತ್ತರು.
ಮಂಗಳೂರಿನ ಪಂಡಿತ ನರಸಿಂಹ ಆಚಾರ್ಯ, ಶ್ರೀದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆರ್. ಎಸ್. ಕಾಮತ್, ಕಾರ್ಯದರ್ಶಿ ಚಿದಾನಂದ ಪೈ ದಂಪತಿಗಳು, ಶ್ರೀದೇವಳದ ಪ್ರಧಾನ ಅರ್ಚಕ ರಘುರಾಮ ಶೆಣೈ, ವೇದಮೂರ್ತಿ ನಾರಾಯಣ ಭಟ್, ವೇದಮೂರ್ತಿ ರವೀಂದ್ರ ಭಟ್ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕ್ಷೇತ್ರದ ದೇವಿ ಸುಪ್ರಭಾತ, ಭಕ್ತಿಗೀತೆಗಳ ಸಿ.ಡಿ. ನಿರ್ಮಾಣದಲ್ಲಿ ರಾಗ ಸಂಯೋಜನೆಯೊಂದಿಗೆ ಹಾಡಿದ ಪುತ್ತೂರು ನರಸಿಂಹ ನಾಯಕ್ ಮತ್ತು ದಾನಿಗಳನ್ನು ಶ್ರೀಗಳು ಫಲಮಂತ್ರಾಕ್ಷತೆ ನೀಡಿ ಹರಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.