ಉಡುಪಿ

ಕಾಣಿಯೂರು ಮಠದ ಮುಖಮಂಟಪ ಲೋಕಾರ್ಪಣೆ

Published On :


ಉಡುಪಿ: ಮುಂದಿನ ಜನವರಿ ತಿಂಗಳಲ್ಲಿ ಕೃಷ್ಣ ಮಠದ ಪರ್ಯಾಯ ಅಧಿಕಾರ ಸ್ವೀಕರಿಸಲಿರುವ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು ಸುಮಾರು ರು. 45 ಲಕ್ಷ ವೆಚ್ಚದಲ್ಲಿ ನವೀಕರಿಸಿರುವ ತಮ್ಮ ಮಠದ ಮುಖ ಮಂಟಪವನ್ನು ಗುರುವಾರ ಸಂಜೆ ಪೇಜಾವರ ಶ್ರೀ ವಿಶ್ವೇಶ ತೀರ್ಥರು ಉದ್ಘಾಟಿಸಿದರು.
ಈ ನೂತನ ಮುಖಮಂಟಪ ಕಾಣಿಯೂರು ಮಠದ ಪ್ರಾಚೀನ ಸೌಂದರ್ಯಕ್ಕೆ ಪೂರಕವಾಗಿದ್ದು, ಪ್ರೇಕ್ಷಣೀಯವಾಗಿದೆ ಎಂದು ಹೇಳಿದರು.
ಕಾಣಿಯೂರು ಮಠದ ಆರಾಧ್ಯ ದೇವರಾದ ನರಸಿಂಹ ಹುಟ್ಟಿದ್ದೆ ಕಂಬಗಳಲ್ಲಿ. ಅದನ್ನು ಈ ಮುಖಮಂಟಪದ ಕಂಬಗಳು ಸಾಂಕೇತಿಸುವಂತಿವೆ ಎಂದು ಪೇಜಾವರ ಶ್ರೀಗಳು ಕೊಂಡಾಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಪರ್ಯಾಯ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ವಹಿಸಿದ್ದರು. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು ಆಶೀವರ್ಚನ ನೀಡಿದರು.
ಇದೇ ಸಂದರ್ಭದಲ್ಲಿ ಕಾಣಿಯೂರು ಶ್ರೀಗಳು ತಮ್ಮ ಗುರುಗಳ ಹೆಸರಿನಲ್ಲಿ ಆರಂಭಿಸಿರುವ 'ವಿದ್ಯಾ ಸಮುದ್ರ ತೀರ್ಥ ಪ್ರಶಸ್ತಿ'ಯನ್ನು ಪ್ರಪ್ರಥಮವಾಗಿ ನಾಡಿನ ಹಿರಿಯ ವಿದ್ವಾಂಸ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಗೆ ಪ್ರದಾನ ಮಾಡಲಾಯಿತು.
ತಮ್ಮ ಮಠದ ಮೂಲದೇವರಾದ ನರಸಿಂಹ ದೇವರ ಹೆಸರಿನಲ್ಲಿ ಆರಂಭಿಸಲಾಗಿರುವ 'ನರಸಿಂಹಾನುಗ್ರಹ ಪ್ರಶಸ್ತಿ'ಯನ್ನು ಮಂಗಳೂರಿನ ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜ್ನ ಅಧ್ಯಕ್ಷ ರಾಘವೇಂದ್ರ ರಾವ್  ಅವರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಪುತ್ತೂರಿನ ಶಾಸಕಿ ಶಕುಂತಲಾ ಶೆಟ್ಟಿ, ಮಾಜಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಇದ್ದರು.
ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು, ಜಲಂಚಾರು ರಘುಪತಿ ತಂತ್ರಿ ಕಾರ್ಯಕ್ರಮ ಸಂಯೋಜಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.