ಡಾ.ಬಿ.ಬಿ. ಶೆಟ್ಟಿ ಸಂಸ್ಮರಣೆ, ಕಲಾರಂಗ ಪ್ರಶಸ್ತಿ ಪ್ರದಾನ
ಉಡುಪಿ: ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಸೋದೆ ವಾದಿರಾಜ ಮಠ, ಯಕ್ಷಗಾನ ಕಲಾರಂಗ ಆಶ್ರಯದಲ್ಲಿ ಭಾನುವಾರ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಡಾ.ಬಿ.ಬಿ. ಶೆಟ್ಟಿ ಸಂಸ್ಮರಣೆ, ಕಲಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಪರ್ಯಾಯ ಶ್ರೀಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶಾಸಕ ಪ್ರಮೋದ್ ಮಧ್ವರಾಜ್, ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಮುಂಬೈ ಗಾಣಿಗ ಸಮಾಜ ಉಪಾಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ ಇದ್ದರು.
ಕೆ.ಎಚ್. ದಾಸಪ್ಪ ರೈ ಪುತ್ತೂರು, ಸುದರ್ಶನ ವಿ. ಶೆಟ್ಟಿ ಪೊಳಲಿ, ನಾರಾಯಣ ಪೂಜಾರಿ ಬ್ರಹ್ಮಾವರ, ಕೆ.ಜಿ. ರಾಮ ರಾವ್ ಪುರಪ್ಪೆಮನೆ ಸಾಗರ, ಪೆರುವೋಡಿ ನಾರಾಯಣ ಭಟ್ ಮುಳಿಗದ್ದೆ ಕಾಸರಗೋಡು, ರೆಂಜಾಳ ರಾಮಕೃಷ್ಣ ರಾವ್ ಬೆಳ್ಳಾರೆ ಸುಳ್ಯ, ಹಂದಲಸು ಲಕ್ಷ್ಮೀನಾರಾಯಣ ಶಿವಮೊಗ್ಗ, ನಾಗೇಶ ಗಾಣಿಗ ಕೋಣ್ಕಿ, ಮಹಾದೇವ ಹೆಗಡೆ ಕಪ್ಪೆಕರೆ ಹೊನ್ನಾವರ, ವಾಸುದೇವ ವಿಷ್ಣು ಭಟ್ ಹೊನ್ನಾವರ, ಗೋಪಾಲಕೃಷ್ಣಯ್ಯ ಎಚ್.ಎಸ್. ಶೃಂಗೇರಿ, ಕೊರಗಪ್ಪ ನಾಯ್ಕ ಕಾಸರಗೋಡು, ಸದಾನಂದ ಮದ್ಲೆಗಾರ, ಕೂಡ್ಲು ಕಾಸರಗೋಡು, ಬನ್ನಂಜೆ ನಾರಾಯಣ ಉಡುಪಿ ಹಾಗೂ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ ಅವರಿಗೆ ಕಲಾರಂಗದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

