ಉಡುಪಿ

ಉಡುಪಿ: ಭಾರತ್ ಪ್ರೆಸ್ ಮಾಲೀಕ ದೇವದಾಸ್ ಪೈಗೆ ಸನ್ಮಾನ

Published On :

ಉಡುಪಿ: ಇಲ್ಲಿನ ತೋನ್ಸೆಯ ಪೈ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಡೆದ 150ನೇ ಶ್ರೀ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀವಿದ್ಯಾಧಿರಾಜ ತೀರ್ಥರ ಸಮ್ಮುಖದಲ್ಲಿ ಉಡುಪಿಯ ಯು. ವಿಶ್ವನಾಥ ಶೆಣೈ ಮಿತ್ರ ವೃಂದದವರು ಭಾರತ್ ಪ್ರೆಸ್ ಮಾಲೀಕ ದೇವದಾಸ್ ಪೈ ಅವರನ್ನು ಸನ್ಮಾನಿಸಿ ಗೌರವಿಸಿದರು.
ದೇವದಾಸ್ ಪೈ 1962ರಲ್ಲಿ ಜನಸಂಘ ಪಕ್ಷದಿಂದ ನಗರಸಭೆಗೆ ಆಯ್ಕೆಯಾದ ದಕ್ಷಿಣ ಭಾರತದ ಪ್ರಥಮವಾಗಿ ಉಡುಪಿ ನಗರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಸೇವಾಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಧಾರ್ಮಿಕ ಪುಸ್ತಕ ಮುಂತಾದವುಗಳನ್ನು ಮುದ್ರಿಸಿದ್ದಾರೆ. ಪೈ ಅವರು ನಗರದ ಕಲ್ಸಂಕ ಎಂಬಲ್ಲಿ ಭಾರತ್ ಪ್ರೆಸ್ ಎಂಬ ಉದ್ಯಮವನ್ನು ಸ್ಥಾಪಿಸಿ ಸುಮಾರು 55 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇವರ ದಾಂಪತ್ಯ ಜೀವನದ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇವದಾಸ್ ಪೈ ಅವರಿಗೆ ಮುದ್ರಣ ಕ್ಷೇತ್ರದ ಬ್ರಹ್ಮ ಎಂಬ ವಿಶೇಷ ಬಿರುದನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವನಾಥ ಶೆಣೈ, ಪ್ರಶಾಂತ್ ಕಾಮತ್, ಪ್ರಭಾ ವಿ. ಶೆಣೈ, ದೇವದಾಸ್ ಕಾಮತ್, ಅಶೋಕ್ ಪೈ, ಡಾ. ಅಮ್ಮುಂಜೆ ಅರವಿಂದ ನಾಯಕ್, ಟಿ. ಅಶೋಕ ಪೈ ಮುಂತಾದವರು ಉಪಸ್ಥಿತರಿದ್ದರು. ಕೊಡಂಕೂರು ದೇವರಾಜ ಮೂರ್ತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.