ಬಿಜೆಪಿ ಸರ್ಕಾರ ಅನುದಾನ ಬಂದಿಲ್ಲ, ಸೇತುವೆ ಕಾಮಗಾರಿ ನಡೆಯುತ್ತಿಲ್ಲ
ಉಡುಪಿ: ಬಹುಕಾಲದ ಮಲ್ಪೆ-ಪಡುಕರೆ ಸೇತುವೆಯ ಕಾಮಗಾರಿಗೆ ನಗರಸಭೆಯಲ್ಲಿ ಬಿಜೆಪಿ ಆಡಳಿತದಲ್ಲಿ ಮಂಜೂರಾಗಿದ್ದ ಅನುದಾನ ಬಿಡುಗಡೆಯಾಗದೆ, ಈಗಿನ ಕಾಂಗ್ರೆಸ್ ಆಡಳಿತ ಅಡಕತ್ತರಿಯಲ್ಲಿ ಸಿಲುಕಿದೆ. ಸೇತುವೆ ಕಾಮಗಾರಿ ಸ್ಥಗಿತಗೊಂಡಿದೆ, ಇದಕ್ಕೆ ಶಾಸಕ ಪ್ರಮೋದ್ ಮಧ್ವರಾಜ್ ನಿರಾಸಕ್ತಿಯೇ ಕಾರಣ ಎಂದೂ ಆರೋಪಿಸಲಾಗುತ್ತಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿದ ನಗರಸಭಾಧ್ಯಕ್ಷ ಯುವರಾಜ್, ಅಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ ನಗರಸಭೆಯ ಅಮೃತ ಮಹೋತ್ಸವದ ವಿಶೇಷ ರು. 25 ಕೋಟಿ ಅನುದಾನ ಪೂರ್ಣ ಬಿಡುಗಡೆಯಾಗಿಲ್ಲ. ಆದ್ದರಿಂದ ಸೇತುವೆ ಕಾಮಗಾರಿ ಕುಂಠಿತವಾಗಿದೆ ಹೊರತು ಶಾಸಕರ ನಿರಾಸಕ್ತಿಯಿಂದಲ್ಲ. ಈಗ ಶಾಸಕರು ಈ ಸೇತುವೆಗೆ ಬೇರೆ ಅನುದಾನ ಪಡೆಯುವುದಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ಈ ಸೇತುವೆ ಕಾಮಗಾರಿಯ ಯೋಜನಾ ವೆಚ್ಚ ರು. 13.50 ಕೋಟಿ, ಯೋಜನೆಗೆ 2012ರ ಡಿ. 11ರಂದು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. 2013ರ ಫೆ. 7ರಂದು ಗುತ್ತಿಗೆಗಾರರ ನೇಮಕ ಆಗಿದೆ. 11ರಂದು ಕಾರ್ಯಾದೇಶ ನೀಡಲಾಗಿದೆ. ನಂತರ ಗುತ್ತಿಗೆದಾರರು ಕಾಮಗಾರಿ ಆರಂಭಿಸಿ, ನದಿಯ ಹೂಳು ತೆಗೆಯುವ, ಪಿಲ್ಲರ್ ಹಾಕುವ ಇತ್ಯಾದಿ ರು. 1.07 ಕೋಟಿಗಳ ಕಾಮಗಾರಿ ನಡೆಸಿದ್ದಾರೆ.
ಯೋಜನಾ ವೆಚ್ಚದ ರು. 13.50 ಕೋಟಿಗಳಲ್ಲಿ ರು. 5.50 ಕೋಟಿಗಳನ್ನು ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಅನುದಾನದಲ್ಲಿ ಮತ್ತು ಅಮೃತ ಮಹೋತ್ಸವದ ವಿಶೇಷ ಅನುದಾನ ರು. 25 ಕೋಟಿಗಳಲ್ಲಿ ರು. 8 ಕೋಟಿ ಸೇತುವೆಗೆ ಮೀಸಲಿರಿಸಲಾಗಿದೆ. ಆದರೆ ಅಮೃತ ಮಹೋತ್ಸವದ ಅನುದಾನ ಪೂರ್ಣ ಬಿಡುಗಡೆಗೊಂಡಿಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಅಮೃತ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸೆಲಿನ್ ಕರ್ಕಡ, ಪೌರಾಯುಕ್ತ ಶ್ರೀಕಾಂತ ರಾವ್ ಇದ್ದರು.
ಆಗ ಬೇಡ ಎಂದವರು ಈಗ ಬೇಕು ಎನ್ನುತ್ತಿದ್ದಾರೆ!
ನಗರಸಭೆಯಲ್ಲಿ (ಮತ್ತು ರಾಜ್ಯದಲ್ಲಿ) ಬಿಜೆಪಿ ಅಧಿಕಾರದಲ್ಲಿದ್ದಾಗ ಈ ಸೇತುವೆಯ ಕಾಮಗಾರಿಯಿಂದ ಭೂಮಿ ಕಳೆದುಕೊಳ್ಳುವವರು ಉಚಿತವಾಗಿ ಭೂಮಿ ನೀಡುವುದಕ್ಕೆ ಸಿದ್ಧರಾಗಿದ್ದರು. ಆದರೆ ಈ ಬಗ್ಗೆ ಯಾವುದೇ ಲಿಖಿತ ದಾನಪತ್ರ ಮಾಡಲಾಗಿಲ್ಲ. ಈಗ ನಗರಸಭೆಯಲ್ಲಿ (ಮತ್ತು ರಾಜ್ಯದಲ್ಲಿ) ಕಾಂಗ್ರೆಸ್ ಆಡಳಿತ ಇದೆ. ಭೂಮಿ ಕಳೆದುಕೊಳ್ಳುವವರು ಉಚಿತವಾಗಿ ಭೂಮಿ ನೀಡುವುದಕ್ಕೆ ತಗಾದೆ ತೆಗೆದಿದ್ದಾರೆ, ಪರಿಹಾರ ನೀಡಬೇಕು ಎನ್ನುತ್ತಿದ್ದಾರೆ. ಇದರಿಂದ ಸೇತುವೆಯ ಯೋಜನಾ ವೆಚ್ಚದಲ್ಲಿಯೂ ಹೆಚ್ಚಳವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

