ರೆಡ್ರಿಬ್ಬನ್ ಕ್ಲಬ್ ಉದ್ಘಾಟನೆ
ಮೂಡುಬೆಳ್ಳೆ; ಇಲ್ಲಿನ ಸಂತ ಲಾರೆನ್ಸ್ ಪಪೂ ಕಾಲೇಜಿನಲ್ಲಿ ರೆಡ್ಡ್ರಿಬ್ಬನ್ ಕ್ಲಬ್ಅನ್ನು ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅಶೋಕ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪಾವ್ಲ್ ಸಿಕ್ವೇರಾ ವಹಿಸಿದ್ದರು. ಜಲ್ಲಾ ಏಡ್ಸ್ ಮಾಹಿತಿ ಅಧಿಕಾರಿ ಸುಮಲತಾ, ಘಟಕ ನಾಯಕಿ ದೀಪಾ ಪಾಟ್ಕರ್ ಇದ್ದರು. ಎನ್.ಎಸ್.ಎಸ್. ಯೋಜನಾಧಿಕಾರಿ ಎಡ್ವರ್ಡ್ ಲಾರ್ಸನ್ ಸ್ವಾಗತಿಸಿದರು. ಸ್ವಯಂ ಸೇವಕಿ ಮಲಿಶಾ ನಿರೂಪಿಸಿದರು.
30ರಂದು ಚಿತ್ರಕಲೆ, ಪ್ರಬಂಧ ಸ್ಪರ್ಧೆ
ಉಡುಪಿ: ಇಲ್ಲಿನ ಕಲ್ಸಂಕದ ರಾಯಲ್ ಗಾರ್ಡನ್ನಲ್ಲಿರುವ ಓಂ ಆಯುರ್ವೇದಿಕ್ಸ್ನಲ್ಲಿ ಧನ್ವಂತರಿ ಜಯಂತಿ ನಿಮಿತ್ತ 8 ರಿಂದ 18 ವರ್ಷದ ಮಕ್ಕಳಿಗೆ ಧನ್ವಂತರಿ ಅವತಾರ ಚಿತ್ರ ಬಿಡಿಸುವ ಹಾಗೂ ಮಹಿಳೆಯರಿಗೆ ಆರೋಗ್ಯ ರಕ್ಷಣೆಯಲ್ಲಿ ಮೂಲಿಕೆಗಳ ಪಾತ್ರ ಎಂಬ ವಿಷಯವಾಗಿ ಪ್ರಬಂಧ ಸ್ಪರ್ಧೆಯನ್ನು 30ರಂದು ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ನಿರ್ದೇಶಕ ಡಾ.ಡಿ. ಕೃಷ್ಣಮೂರ್ತಿ, ಶ್ರೀ ಓಂ ಆಯುರ್ವೇದಿಕ್ಸ್, ರಾಯಲ್ ಗಾರ್ಡನ್, ಕಲ್ಸಂಕ, ಉಡುಪಿ ಅಥವಾ ದೂರವಾಣಿ ಸಂಖ್ಯೆ -9448261716 ಅನ್ನು ಸಂಪರ್ಕಿಸಲು ಕೋರಲಾಗಿದೆ.
ರಸ್ತೆ ಕಾಮಗಾರಿಗೆ ಚಾಲನೆ
ಕೋಟ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಳಿಯೂರು ಗ್ರಾಮದ ಹಾಡಿಕೆರೆ ಶನೇಶ್ವರ ದೇವಸ್ಥಾನಕ್ಕೆ ಮಾರ್ಗ ಕಲ್ಪಿಸುವ ರಸ್ತೆಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಶಾಸಕರ ಅನುದಾಡಿ ರು. 5 ಲಕ್ಷ ಹಾಗೂ ಕೋಟ ಗ್ರಾ.ಪಂ. ಅನುದಾನದಡಿ ರು. 50 ಸಾವಿರ ನೆರವಿನಿಂದ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ರಾಜಾರಾಮ್ ಚಾಲನೆ ನೀಡಿದರು. ಕೋಟ ಸಮುದಾಯ ಆಸ್ಪತ್ರೆಗೆ ಮಾರ್ಗ ಕಲ್ಪಿಸುವ ರಸ್ತೆಗೆ ಜಿಲ್ಲಾ ಪಂಚಾಯಿತಿ ಅನುದಾನದಿಂದ ರು. 10 ಲಕ್ಷ ಒದಗಿಸಲಾಗಿದ್ದು, ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ರಾಜಾರಾಂ ಇತ್ತೀಚೆಗೆ ಚಾಲನೆ ನೀಡಿದರು. ತಾ.ಪಂ. ಸದಸ್ಯ ಭರತ್ ಕುಮಾರ್ ಶೆಟ್ಟಿ, ರಾಘವೇಂದ್ರ ಕಾಂಚನ್, ಕೋಟ ಗ್ರಾ.ಪಂ. ಅಧ್ಯಕ್ಷ ಎಂ. ಶಿವ ಪೂಜಾರಿ, ಸದಸ್ಯ ಅಜಿತ್ ದೇವಾಡಿಗ, ಪಾಂಡು ಪೂಜಾರಿ, ಶಿವರಾಮ್ ಶೆಟ್ಟಿ, ಸಂಘ ಪರಿವಾರದ ಮುಖಂಡ ರಾಜೀವ ದೇವಾಡಿಗ, ಕೋಟ ಗ್ರಾ.ಪಂ. ಸದಸ್ಯರಾದ ಸುಧಾಕರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಚಂದ್ರಶೇಖರ್ ಆಚಾರ್ಯ, ಚಂದ್ರಪೂಜಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

