ಉಡುಪಿ

ರಾ.ವಿಚಾರ ಸಂಕಿರಣಕ್ಕೆ ಅರ್ಜಿ ಆಹ್ವಾನ

Published On :

ಕುಂದಾಪುರ: ಸುವರ್ಣ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಮತ್ತು ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾದ ಉಡುಪಿ ವಿಭಾಗದ ಸಹಯೋಗದಲ್ಲಿ ಯುಜಿಸಿ ಪ್ರಾಯೋಜಕತ್ವದಲ್ಲಿ ಭಾರತೀಯ ಬಂಡವಾಳ ಮಾರುಕಟ್ಟೆ ಹೊಸ ಪ್ರವೃತ್ತಿಗಳು ಎಂಬ ವಿಷಯ ಕುರಿತು ಡಿಸೆಂಬರ್ 16 ಮತ್ತು 17ರಂದು ರಾಷ್ಟ್ರೀಯ ವಿಚಾರಸಂಕಿರಣ ನಡೆಯಲಿದೆ.  ಈ ವಿಚಾರಸಂಕಿರಣದಲ್ಲಿ  ಭಾಗವಹಿಸಿ ಪ್ರಬಂಧಗಳನ್ನು  ಮಂಡಿಸಲು  ಆಸಕ್ತ ರಾಷ್ಟ್ರ ಮತ್ತು ರಾಜ್ಯಾದ್ಯಂತದ ಉಪನ್ಯಾಸಕರು ಮತ್ತು ಸಂಶೋಧಕರಿಂದ ಪ್ರಬಂಧಗಳನ್ನು ಆಹ್ವಾನಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9481754394 ಸಂಪರ್ಕಿಸಿ.

ಚಂದ್ರಹಾಸ ಸುವರ್ಣಗೆ ಸಾಧನಾಶ್ರೀ ಪ್ರಶಸ್ತಿ
ಕಾರ್ಕಳ: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮಗ್ರ ಸಾಧನೆ ಮಾಡಿದ ಶಿರಡಿ ಸಾಯಿಬಾಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚಂದ್ರಹಾಸ ಸುವರ್ಣ ಇವರಿಗೆ ಇತ್ತೀಚೆಗೆ ನಡೆದ ಜೇಸಿಐ ಕಾರ್ಕಳ ಸೆಂಟ್ರಲ್‌ನ ಜೇಸಿ ಸಪ್ತಾಹದಲ್ಲಿ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಜೇಸಿಐ ಭಾರತ ವಲಯ-15ರ ಪೂರ್ವ  ವಲಯಾಧ್ಯಕ್ಷ ಡಾ. ಅರವಿಂದ ರಾವ್ ಕೇದಗೆ, ಕಾರ್ಕಳ ಬಿಜೆಪಿ ಸದಸ್ಯರಾದ ಗಿರಿಧರ ನಾಯಕ್, ಲಯನ್ಸ್ ಸಂಯೋಜಕರಾದ ಎನ್.ಎಂ. ಹೆಗ್ಡೆ, ಜೇಸಿಐ ಸೆಂಟ್ರಲ್‌ನ ಅಧ್ಯಕ್ಷರಾದ ಸತೀಶ್ ಪೂಜಾರಿ, ವಲಯ ಉಪಾಧ್ಯಕ್ಷ ಗಿರೀಶ್  ರಾವ್, ಜೇಸಿರೆಟ್ ಅಧ್ಯಕ್ಷೆ ಡಾ. ಪೂಜಾರಾಣಿ, ಜ್ಯೂನಿಯರ್ ಜೇಸಿ ಅಧ್ಯಕ್ಷರಾದ ಅಕ್ಷಯ್ ಪಿ. ಬಂಗೇರ, ಕಾರ್ಯಕ್ರಮ ನಿರ್ದೇಶಕರಾದ ಸುಧಾಕರ ಪೂಜಾರಿ, ಸುನಿಲ್ ಕೋಟ್ಯಾನ್, ಕಾರ್ಯದರ್ಶಿ ರತ್ನಾಕರ್ ನಾಯ್ಕ್ ಹಾಗೂ ರಾಜೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.