ಹೊದ್ರಾಳಿ ದೇವಸ್ಥಾನದಲ್ಲಿ ಪೌರಾಣಿಕ ಯಕ್ಷಗಾನ ಉತ್ಸವ
ಕೋಟ: ಬೆಂಗಳೂರಿನ ಯಕ್ಷದೇಗುಲ ತಂಡದ ಪೌರಾಣಿಕ ಯಕ್ಷಗಾನ ಉತ್ಸವವನ್ನು ಕೋಟೇಶ್ವರದ ಹೊದ್ರಾಳಿ ತ್ರೀಕಣ್ಣೇಶ್ವರಿ ಕ್ಷೇತ್ರದಲ್ಲಿ ಧರ್ಮದರ್ಶಿ ಕೆ. ರಾಮದಾಸ್ ರಾವ್ ಉದ್ಘಾಟಿಸಿದರು.
ಯಕ್ಷಗಾನವೆಂಬುದು ಒಂದು ಅದ್ಭುತ ಕಲೆ, ಅದು ನಮಗೆ ಹಿರಿಯರು ನಮಗಾಗಿ ನೀಡಿದ ಅಪೂರ್ವವಾದ ಸೊತ್ತು. ಅದನ್ನು ಕೇವಲ ಪ್ರೇಕ್ಷಕರನ್ನು ಸಂತೋಷ ಪಡಿಸುವುದಕ್ಕೋಸ್ಕರ ವಿಕೃತಗೊಳಿಸಬಾರದು ಎಂದವರು ಈ ಸಂದರ್ಭದಲ್ಲಿ ಆಶಿಸಿದರು.
ಅತಿಥಿಯಾಗಿ ಉದ್ಯಮಿ ಸದಾನಂದ ನಾವಡ, ಶ್ರೀತ್ರಿಕಣ್ಣೇಶ್ವರಿ ವಾಣಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ತೇಜೇಶ್ವರ ರಾವ್ ಉಪಸ್ಥಿತರಿದ್ದರು. ಯಕ್ಷದೇಗುಲದ ಅಧ್ಯಕ್ಷ ಬಾಲಕೃಷ್ಣ ಭಟ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ನರಸಿಂಹ ತುಂಗ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ನಂತರ ಯಕ್ಷದೇಗುಲ ತಂಡದ ಕಲಾವಿದರು ಸುದರ್ಶನ ವಿಜಯ ಎಂಬ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು. ಸುದರ್ಶನನಾಗಿ ಉದಯ ಹೆಗಡೆ, ವಿಷ್ಣುವಾಗಿ ತಮ್ಮಣ್ಣ ಗಾಂವ್ಕರ್, ಲಕ್ಷ್ಮೀಯಾಗಿ ಗಣಪತಿ ಹೆಗಡೆ, ದೇವೇಂದ್ರನಾಗಿ ಉಪ್ಪುಂದ ಗಣೇಶ, ವರುಣನಾಗಿ ರಮೇಶ ಶೆಟ್ಟಿ, ಹಾಸ್ಯದಲ್ಲಿ ವಿಶ್ವನಾಥ ಶೆಟ್ಟಿ ಹಾಗೂ ಚಿಟ್ಟೆ ಇಟ್ಟು ಬಣ್ಣದ ವೇಷದಲ್ಲಿ ರಂಜಿಸಿದವರು ಕೃಷ್ಣಮೂರ್ತಿ ಉರಾಳರು. ಹಿಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ ಮದ್ದಳೆ ವಾದನದಲ್ಲಿ ಭಾಸ್ಕರ ದೇವಾಡಿಗ, ಚಂಡೆಯಲ್ಲಿ ಮಂಜುನಾಥ ಭಟ್ ಅವರು ಭಾಗವಹಿಸಿದರು. ರಂಗದ ಹಿಂದೆ ಉದಯ ಬೋವಿ, ನರಸಿಂಹ ತುಂಗ ಭಾಗವಹಿಸಿದರು. ಕೋಟ ಸುದರ್ಶನ ಉರಾಳ ಅವರು ಈ ಎಲ್ಲಾ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

