ಉಡುಪಿ

ಬಾರ್ಕೂರು: ಮೊಕ್ತೇಸರರ ವಾರ್ಷಿಕ ಸಭೆ

Published On :

ಬಾರ್ಕೂರು: ಇಲ್ಲಿನ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಸಂಬಂಧಪಟ್ಟ 12 ಮಾಗಣೆಗಳ ಕೂಡುವಳಿಕೆಗಳ ಮೊಕ್ತೇಸರರ ವಾರ್ಷಿಕ ಸಭೆ ಇತ್ತೀಚೆಗೆ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.
2012-13ನೇ ಸಾಲಿನ ಜಮಾ ಖರ್ಚಿನ ವಿವರಗಳನ್ನು ಉಮೇಶ್ ಆಚಾರ್ಯ ಬಾರಕೂರು ಸಭೆಯ ಮುಂದಿಟ್ಟರು. ಶ್ರೀಧರ ಆಚಾರ್ಯ ಬಂಡೀಮಠ ವಾರ್ಷಿಕ ವರದಿ ಓದಿದರು. ಡಿ.20ರಂದು ಪಂಚವಾರ್ಷಿಕ ಸಭೆ ನಡೆಸಲು ನಿರ್ಧರಿಸಲಾಯಿತು.
ಆಡಳಿತ ಮೊಕ್ತೇಸರ ಕೆ. ವಾದಿರಾಜ ರಾವ್ ನೇಜಾರು ಅಧ್ಯಕ್ಷತೆ ವಹಿಸಿದ್ದರು.
ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿಯ ಮಾಜಿ ಆಡಳಿತ ಮೊಕ್ತೇಸರ ಯು.ಕೆ.ಎಸ್. ಸೀತಾರಾಮ ಆಚಾರ್ಯ, ದೇವಳದ ಮೊಕ್ತೇಸರ ಅಲೆವೂರು ಯೋಗೀಶ ಆಚಾರ್ಯ, ಆಡಳಿತ ಸಮಿತಿಯ ಹಿರಿಯ ಸದಸ್ಯ ಬಿ.ಎ. ಆಚಾರ್ಯ, ಸಾಲಿಗ್ರಾಮ ಗೋಪಾಲಕೃಷ್ಣ ಆಚಾರ್ಯ, ವಿಶ್ವಕರ್ಮ ಮಹಾಸಭಾದ ಉಡುಪಿ ಘಟಕ ಅಧ್ಯಕ್ಷ ದಯಾನಂದ ಆಚಾರ್ಯ ಕರಂಬಳ್ಳಿ, ಕಡೆಕಾರು ಶ್ರೀನಿವಾಸ ಆಚಾರ್ಯ, ಕೋಟ ಚಂದ್ರ ಆಚಾರ್ಯ ಇದ್ದರು.
ಜಯರಾಮ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಆಚಾರ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.