ಕಾಲೇಜು ವಿದ್ಯಾರ್ಥಿನಿ ಮಾನಭಂಗ ಯತ್ನ; ಇಬ್ಬರು ಯುವಕರಿಗೆ ಥಳಿತ
ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಇಬ್ಬರು ರಾಜಸ್ಥಾನ ಮೂಲದ ಯುವಕರಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ನಗರದ ಹೊರ ವಲಯದ ಮಂಜಲ್ಪಡ್ಪು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ರಾಜಸ್ಥಾನದ ಮೂಲದ ಯುವಕರಾದ ಪುತ್ತೂರಿನ ಮಾರ್ಬಲ್ ಅಂಗಡಿಯೊಂದರಲ್ಲಿ ಟೈಲ್ಸ್ ಅಳವಡಿಸುವ ಕೂಲಿ ಕಾರ್ಮಿಕರಾಗಿರುವ ಗಜೇಂದ್ರ ಸಿಂಗ್ ಮತ್ತು ರಾಹುಲ್ ಹಲ್ಲೆಗೊಳಗಾದವರು. ಪುತ್ತೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿ ಸಂಜೆ ತನ್ನ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದಾಗ ರಿಕ್ಷಾದಲ್ಲಿ ಬಂದಿಳಿದ ಇಬ್ಬರು ಯುವಕರು ಆಕೆಯ ಚೂಡಿದಾರದ ಶಾಲನ್ನು ಎಳೆದು ಮಾನಭಂಗಕ್ಕೆ ಯತ್ನಿಸಿದರು. ಇದಕ್ಕೆ ಪ್ರತಿರೋಧ ಒಡ್ಡಿದ ಆಕೆಗೆ ಯುವಕನೊಬ್ಬ ಹೊಡೆದಿದ್ದಾನೆ. ಇದರಿಂದ ಬೆದರಿದ ವಿದ್ಯಾರ್ಥಿನಿ ಬೊಬ್ಬೆ ಹಾಕಿದಾಗ ಅಲ್ಲಿಗೆ ಬಂದ ಸ್ಥಳೀಯರು ಯುವಕರಿಗೆ ಥಳಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. ಯುವತಿ ನೀಡಿದ ದೂರಿನಂತೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆ ಮೇಲಿನ ದೌರ್ಜನ್ಯಗಳಿಗೆ ಶಿಕ್ಷಣವೊಂದೇ ಅಸ್ತ್ರ: ಪ್ರೊ.ಇಂದುಮತಿ
ಬೆಳಗಾವಿ: ಇಂದು ಮಹಿಳೆ ಎಲ್ಲ ರಂಗಗಳಲ್ಲಿಯೂ ತನ್ನ ಸಾಮರ್ಥ್ಯವನ್ನು ತೋರುವಲ್ಲಿ ಸಫಲಳಾಗಿದ್ದಾಳೆ. ಆದರೂ ಆಕೆ ಮೇಲಿನ ತಾರತಮ್ಯ, ಕೀಳರಿಮೆ, ದೌರ್ಜನ್ಯಗಳು ಕಿಡಿಮೆಯಾಗಿಲ್ಲ. ಇದರಿಂದ ಮಹಿಳೆ ಹೊರಬರಲು ಶಿಕ್ಷಣವೊಂದೇ ಪ್ರಮುಖ ಅಸ್ತ್ರ ಎಂದು ದಾವಣಗೆರೆ ವಿವಿ ವಿಶ್ರಾಂತ ಕುಲಪತಿ ಪ್ರೊ. ಇಂದುಮತಿ ಅಭಿಪ್ರಾಂುಪಟ್ಟರು. ಗುರವಾರ ಕಿತ್ತೂರು ಉತ್ಸವದ ಕಾಂರ್ುಕ್ರಮದಲ್ಲಿ ಆಂೋಜಿಸಲಾಗಿದ್ದ ವಿಚಾರಣ ಸಂಕಿರಣ ಉದ್ಘಾಟಿಸಿ ಮಾತನಾಡಿ, ಗ್ರಾಪಂ, ತಾಪಂ ಹಾಗೂ ಜಿಪಂಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ನೀಡಿದ್ದರೂ, ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಇಂಥ ಮೀಸಲಾತಿ ನೀಡದೆ ತಾರತಮ್ಯವೆಸಗಲಾಗುತ್ತಿದೆ. ಇಂದು ಮಹಿಳೆಂುರು ಆರ್ಥಿಕವಾಗಿ ಸದೃಢರಾಗಲು ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶಗಳಿವೆ ಎಂದರು. ವಿಚಾರ ಸಂಕಿರಣದಲ್ಲಿ 'ಕನ್ನಡಪರ ವರದಿಗಳು ಮತ್ತು ಇಂದು'ಎಂಬ ವಿಷಂು ಕುರಿತು ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಮಾತನಾಡಿದರು. 'ಏಕೀಕರಣಕ್ಕೆ ಬೆಳಗಾವಿ ಜಿಲ್ಲೆಂು ಕೊಡುಗೆ' ಕುರಿತು ಡಾ.ಗುರುಪಾದ ಮರಿಗುದ್ದಿ, 'ಕೃಷಿಂುಲ್ಲಿ ಮಹಿಳೆಂುರ ಪಾತ್ರ' ಕುರಿತು ರಾಜೇಶ್ವರಿ ಪಾಟೀಲ್ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

