ಅಸಹಾಯಕರಿಗೆ ಸೇವೆ ಮಾಡುವುದು ಪುಣ್ಯದ ಕೆಲಸ: ರಾಜೇಂದ್ರ ಕುಮಾರ್
ಬೆಳ್ತಂಗಡಿ: ಸಮಾಜಕಟ್ಟುವ ಕಾರ್ಯಗಳಲ್ಲಿ ಸಮಾಜದ ಒಂದು ವರ್ಗವಾದ ದುರ್ಬಲ ಅಸಾಹಯಕ ಮಂದಿಯನ್ನು ಗುರುತಿಸಿ ಅವರ ಸೇವೆ ಮಾಡುವುದು ಒಂದು ಪುಣ್ಯದ ಕೆಲಸ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ವೇಣೂರು ಬಾಹುಬಲಿ ಸಭಾಭವನದಲ್ಲಿ ಜೈನ್ ಮಿಲನ್ ವೇಣೂರು ಇವರ ಅತಿಥೇಯದಲ್ಲಿ ನಡೆದ ಭಾರತೀಯ ಜೈನ್ ಮಿಲನ್ನ ವಲಯ 8 ರ ಮಂಗಳೂರು ವಿಭಾಗದ ಕರಾವಳಿ ಮಿಲನೋತ್ಸವ- 2013 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಯಾರೂ ಕೆಟ್ಟವರಲ್ಲ. ಈ ನಂಬಿಕೆಯನ್ನು ನಡೆಸುವ ಪ್ರವರ್ತಿಸುವ ಕೆಲಸ ಸಮಾಜದಿಂದ ಆಗಬೇಕು. ಅಹಿಂಸೆಯೆಂಬ ಅಸ್ತ್ರದಿಂದ ಇಹವನ್ನು ಗೆಲ್ಲಬಹುದಾಗಿದೆ. ಶುದ್ಧ ಚಾರಿತ್ರ್ಯದಿಂದ ಆತ್ಮನನ್ನು ಉನ್ನತೀಕರಿಸಬಹುದಾಗಿದೆ ಎಂದು ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಸಮಾರಂಭದ ಸ್ಮರಣ ಸಂಚಿಕೆ ಹಾಗೂ ಇರ್ವತ್ತೂರು ವಿಜಯ ಜಿ. ಜೈನ್ ರಚಿಸಿದ ಪುಸ್ತಕ ಬಿಡುಗಡೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ವಲಯ 8 ರ ಅಧ್ಯಕ್ಷ ಎಂ.ಎಸ್. ಮೃತ್ಯುಂಜಯ ವಹಿಸಿದ್ದರು. ಅಳದಂಗಡಿ ಅರಮನೆ ಡಾ. ಪದ್ಮಪ್ರಸಾದ್ ಅಜಿಲ ಧ್ವಜಾರೋಹಣಗೈದರು. ಜೈನ್ಮಿಲನ್ ಮಂಗಳೂರು ವಿಭಾಗ ಅಧ್ಯಕ್ಷ ಡಾ.ಬಿ. ಯಶೋವರ್ಮ, ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ ಆಗಮಿಸಿದ್ದರು.
ವೇಣೂರು ಜೈನ್ಮಿಲನ್ ಅಧ್ಯಕ್ಷ ಬಿ. ರತ್ನವರ್ಮ ಇಂದ್ರ, ಕಾರ್ಯದರ್ಶಿ ಪಿ. ಪ್ರಮೋದ್ ಕುಮಾರ್, ಮಂಗಳೂರು ವಲಯ ನಿರ್ದೇಶಕರಾದ ಸುದರ್ಶನ್ ಜೈನ್, ರಾಜಶ್ರೀ ಹೆಗ್ಡೆ, ಧರಣೇಂದ್ರ ಕುಮಾರ್, ರಾಜವರ್ಮ ಆರಿಗ, ಶೋಭಕರ್ ಬಳ್ಳಾಲ್, ಶಿಶುಪಾಲ್ ಜೈನ್ ಇದ್ದರು. ಜೈನ್ ಮಿಲನ್ ಮಂಗಳೂರು ವಲಯ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎಂ. ಮಹಾವೀರ್ ಜೈನ್ ನಿರ್ವಹಿಸಿದರು. ವಿಭಾಗ ನಿರ್ದೇಶಕ ಬಿ. ಮಾಣಿಕ್ಯರಾಜ್ ಅಜ್ರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

