ಪೊಲೀಸ್ ಭದ್ರತೆಯಲ್ಲಿ ಮಲ್ಲಾರು ಗ್ರಾಮ ಸಭೆ
ಕಾಪು: ಇಲ್ಲಿನ ಮಲ್ಲಾರು ಗ್ರಾಮದ ಪ್ರಥಮ ಗ್ರಾಮಸಭೆಯನ್ನು ಪೊಲೀಸ್ ರಕ್ಷಣೆಯಲ್ಲಿ ನಡೆಸಲಾಯಿತು.
ಸೋಮವಾರ ಬೆಳಗ್ಗೆ 11 ಗಂಟೆಗೆ ಗ್ರಾಮಸಭೆ ಆರಂಭವಾಗಬೇಕಾಗಿದ್ದರೂ, 12 ಗಂಟೆಯವರೆಗೂ ನೋಡಲ್ ಅಧಿಕಾರಿ ಹಾಗೂ ಗ್ರಾಮಸ್ಥರ ಅಹವಾಲುಗಳನ್ನು ಕೇಳುವುದಕ್ಕೆ ಬರಬೇಕಾಗಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಬಂದಿಲ್ಲ, ಮಲ್ಲಾರು ಗ್ರಾಮದಲ್ಲಿ 5000 ಜನರಿದ್ದಾರೆ, ಆದರೆ 100 ಜನರು ಕುಳಿತುಕೊಳ್ಳುವ ಮಿನಿ ಸಭಾಂಗಣದಲ್ಲಿ 25 ಕುರ್ಚಿಗಳನ್ನು ಹಾಕಿ ಸಭೆ ನಡೆಸಲಾಗುತ್ತಿದೆ, ವರ್ಷಕ್ಕೆ 2 ಬಾರಿ ನಡೆಯಬೇಕಾದ ಗ್ರಾಮಸಭೆ 3 ವರ್ಷಗಳಿಂದ ನಡೆದೇ ಇಲ್ಲ. ಗ್ರಾಮಸಭೆಯ ಬಗ್ಗೆ ಪ್ರತಿ ಮನೆಗೆ ಮಾಹಿತಿ ನೀಡಬೇಕಾಗಿದ್ದರೂ ನೀಡಿಲ್ಲ ಎಂದು ಕೆಲವು ಜನರು ಸಭೆಯ ಆರಂಭದಲ್ಲಿಯೇ ತೀವ್ರ ಆಕ್ರೋಷಗೊಂಡು ಸಭೆಯನ್ನು ಬಹಿಷ್ಕರಿಸುವ ಘೊಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದರು. ಅಲ್ಲದೆ ಗ್ರಾಮ ಸಭೆಯನ್ನು ಮಂದೂಡುವಂತೆ ಒತ್ತಾಯಿಸಿದರು. ಗ್ರಾಪಂ ಸದಸ್ಯರು ಸಮಜಾಯಿಷಿ ನೀಡಿದರೂ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಲಕ್ಷಣಗಳು ಕಂಡು ಬಂದಾಗ ಪ್ರತಿಭಟನಾಕಾರರನ್ನು ಕಾಪು ಠಾಣಾಧಿಕಾರಿ ಅರ್ಚನಾ ಎಚ್.ಕೆ ಬಲವಂತವಾಗಿ ಹೊರಕಳುಹಿಸಬೇಕಾಯಿತು.
ಗ್ರಾಪಂ ಸದಸ್ಯ ಅನ್ವರ್ ಆಲಿ ಮಾತನಾಡಿ, ಗ್ರಾಮ ಸಭೆಯಲ್ಲಿ ಹೆಚ್ಚಿನ ಅಧಿಕಾರಿಗಳು ಭಾಗವಹಿಸಿದ್ದಾರೆ. ಆದರೂ ಕೆಲವು ಬೆರಳೆಣಿಕೆಯ ಗ್ರಾಮಸ್ಥರು ಬಹಿಷ್ಕಾರದ ಬೆದರಿಕೆ ಹಾಕಿದ್ದಾರೆ. ನಾವು ಜನರಿಗೆ ಸಮರ್ಪಕ ಮಾಹಿತಿ ನೀಡಿದ್ದೇವೆ. ಅಧ್ಯಕ್ಷರ ಮೇಲೆ ವಿನಾಕಾರಣ ಕಸರೆರೆಚುವುದಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಕೊನೆಗೆ ಪೊಲೀಸರ ಕಾವಲಿನಲ್ಲಿ ಗ್ರಾಪಂ ಅಧ್ಯಕ್ಷ ಲುತ್ಫುಲ್ಲಾ ರೆಹೆಮಾನ್ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು. ನೋಡಲ್ ಅಧಿಕಾರಿಯಾಗಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಾಂತ ಫಡ್ಕೆ ತಡವಾಗಿ ಆಗಮಿಸಿದ್ದರು. ಸ್ಥಳೀಯ ಜಿಪಂ ಸದಸ್ಯ ಕಟಪಾಡಿ ಶಂಕರ ಪೂಜಾರಿ, ತಾಪಂ ಸದಸ್ಯೆ ಅನಿತಾ ಸುಧಾಮ, ಗ್ರಾಪಂ ಉಪಾಧ್ಯಕ್ಷೆ ಮೋಹಿನಿ ಶೆಟ್ಟಿ, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

