ನಾಧವೈಭವಂ ಸಂಸ್ಥಾಪನಾ ದಿನಾಚರಣೆ, ಗುರುವಂದನೆ
ಉಡುಪಿ: ಗುರುವಂದನೆ ಕಾರ್ಯಕ್ರಮದ ಮೂಲಕ ವಿದ್ಯಾಪ್ರಸಾರದಲ್ಲಿ ಭೌತಿಕ ಗುರುವಿನ ನೆಪದಲ್ಲಿ ವ್ಯಕ್ತಿಯೊಳಗಿನ ಅನನ್ಯ ಗುರುವಿನೊಂದಿಗೆ ಸಂಧಿಸುವಂತೆ ಮಾಡಿ ಸಮಷ್ಟಿಗೆ ಬೇಕಾದ ವೃಷ್ಟಿಯನ್ನು ನಿರ್ಮಾಣ ಮಾಡುವ ಕಾರ್ಯವನ್ನು ವಾಸುದೇವ ಭಟ್ಟರು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಗುರುವು ವ್ಯಕ್ತಿಗಿಂತಲೂ ಮಿಗಿಲಾಗಿ ಅಸ್ತಿತ್ವಕ್ಕೆ ಬೇಕಾದ ಒಂದು ಉಪಸ್ಥಿತಿ ಎಂದು ಚಿಂತಕ ಅಂಬಲಪಾಡಿ ಶ್ರೀಪತಿ ಆಚಾರ್ಯ ತಿಳಿಸಿದರು.
ಇತ್ತೀಚಿಗೆ ಇಲ್ಲಿನ ಪಿಪಿಸಿಯ ಶ್ರೀ ವಿಭುದೇಶ ತೀರ್ಥ ಸಂಭಾಗಣದಲ್ಲಿ ನಡೆದ ನಾದವೈಭವಂ ಸಂಸ್ಥಾಪನಾ ದಿನಾಚರಣೆ, ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಡಾ. ಉಪ್ಪಂಗಳ ರಾಮಭಟ್ ಅವರಿಂದ ಗುರು ಪಿಟೀಲು ಮಂಜುನಾಥಯ್ಯ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ ಗರುವಂದನೆ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಉಪ್ಪೂರು ತೆಂಕಬೆಟ್ಟಿನ ನಾಗಾಪಾತ್ರಿ ಜಯಾನಂದ ಆಚಾರ್ಯ, ನಿಟ್ಟೆ ಎನ್ಎಂಎಎಂ ಕಾಲೇಜಿನ ಉಪಪ್ರಾಂಶುಪಾಲ ಡಾ.ಐ.ಆರ್. ಮಿತ್ತಂತ್ತಾಯ ಉಪಸ್ಥಿತರಿದ್ದರು.
ನಾದವೈಭವಂ ಸಂಸ್ಥಾಪಕ, ನಿರ್ದೇಶಕ ವಾಸುದೇವ ಭಟ್ ಸ್ವಾಗತಿಸಿ, ನಿರೂಪಿಸಿದರು. ಅನಸೂಯ ಉಪ್ಪೂರು, ಭಾಗ್ಯಲಕ್ಷ್ಮೀ, ರೂಪಾ ಶೆಟ್ಟಿ, ಶಾರದಾ ದೈವಜ್ಞ, ಡಾ. ಭಾರತಿ ಮರವಂತೆ ಅಂಶುಮಾಲಿ ಸಹಕರಿಸಿದರು.
ಈ ಸಂದರ್ಭದಲ್ಲಿ ನಾದವೈಭವಂನ ಗಾಯಕರಿಂದ ನಾದಾನುಸಂಧಾನ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

