ಉಡುಪಿ

ಸಾಧಕರ ಸ್ಮರಣೆ ಕಿರಿಯರಿಗೆ ಪ್ರೇರಣೆ: ಸುರೇಂದ್ರ ಅಡಿಗ

Published On :

ಮರವಂತೆ: ಹಿರಿಯ ಸಾಧಕರ ಬದುಕು ಮತ್ತು ಸಾಧನೆಗಳನ್ನು ಸಾರ್ವಜನಿಕವಾಗಿ ಸ್ಮರಿಸುವುದರಿಂದ ಕಿರಿಯರು ಸ್ಫೂರ್ತಿ, ಪ್ರೇರಣೆ ಪಡೆಯಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.  
ಶಂಕರನಾರಾಯಣ ಶ್ಯಾನುಭೋಗ್ ಸಂಸ್ಮರಣ ಸಮಿತಿ ಆಶ್ರಯದಲ್ಲಿ ಗುರುವಾರ ಶಿರೂರು ಮೇಲ್ಪಂಕ್ತಿಯಲ್ಲಿ ನಡೆದ ಸಂಸ್ಮರಣ ಕಾರ್ಯಕ್ರಮದಲ್ಲಿ  ಮಧ್ಯಮಾವತಿ ಸಂಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.  ಅಧ್ಯಕ್ಷತೆ ವಹಿಸಿದ್ದ ಹೊನ್ನಾವರ ಕವಲಕ್ಕಿಯ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಜಿ. ಹೆಗ್ಡೆ ಶ್ಯಾನುಭೋಗರ ಸಾಧನೆಗಳನ್ನು ವಿವರಿಸಿದರು.
ಪಾರ್ವತಿ ಶಂಕರನಾರಾಯಣ ಶ್ಯಾನುಭೋಗ್ ಸ್ವಾಗತಿಸಿದರು. ಬೈಂದೂರು ಹೋಬಳಿ ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಮಾತನಾಡಿದರು.
ನಿವೃತ್ತ ಉಪನ್ಯಾಸಕ ಪಿ. ಶೇಷಪ್ಪಯ್ಯ, ಎಸ್. ಜನಾರ್ದನ, ಉಪ್ಪಿನಕುದ್ರು ಯಕ್ಷಗಾನ ಗೊಂಬೆಯಾಟ ಮಂಡಳಿಯ ಸಂಚಾಲಕ ಯು. ಭಾಸ್ಕರ ಕಾಮತ್ ಸಂಸ್ಮರಣ ಭಾಷಣ ಮಾಡಿದರು.  ಗೊಂಬೆಯಾಟ ಮಂಡಳಿಯ ಮದ್ದಳೆಗಾರ ಎನ್. ಮಹಾಬಲೇಶ್ವರ ಶೇಟ್‌ಗೆ ಭಾಗವತ ಶಂಕರನಾರಾಯಣ ಶ್ಯಾನುಭೋಗ್ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಶಿಕ್ಷಕ ದಿನದ ನಿಮಿತ್ತ ಜಿಲ್ಲಾ ಕ.ಸಾ.ಪ. ವತಿಯಿಂದ ಪಿ. ಶೇಷಪ್ಪಯ್ಯ ಅವರನ್ನು ಸುರೇಂದ್ರ ಅಡಿಗ ಗೌರವಿಸಿದರು.
ಸುಬ್ರಹ್ಮಣ್ಯ ಗುಡ್ಗೆ ವಂದಿಸಿದರು. ಕೆ.ವಿ. ಹೆಗ್ಡೆ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪಂಚವಟಿ ಪ್ರಸಂಗದ ತಾಳಮದ್ದಳೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.