ಶಿಕ್ಷಕರಿಗೆ ತ್ಯಾಗ ಅನಿವಾರ್ಯ: ಸಾಮಗ
ಉಡುಪಿ: ವಿದ್ಯಾರ್ಥಿಗಳಿಗೆ ಶಿಕ್ಷಕರು ಆದರ್ಶ ಪ್ರಾಯವಾಗಿರಬೇಕು. ಅದಕ್ಕಾಗಿ ಶಿಕ್ಷಕರಾಗಿದ್ದವರು ಅನಿವಾರ್ಯವಾಗಿ ತಮ್ಮ ಬದುಕಿನಲ್ಲಿ ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ ಎಂದು ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಉಡುಪಿ ರೋಟರಿ ಮತ್ತು ಇನ್ನರ್ವೀಲ್ ಕ್ಲಬ್ ಆಯೋಜಿಸಿದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಈ ಸಂದರ್ಭ ಗೋಪಾಲಕೃಷ್ಣ ಭಟ್ ಮತ್ತು ರಂಗನಾಥ ಸಾಮಗ ಅವರನ್ನು ಹೊಸದಾಗಿ ರೋಟರಿಗೆ ಸೇರ್ಪಡೆಗೊಳಿಸಲಾಯಿತು. ಇನ್ನರ್ವೀಲ್ ಕ್ಲಬ್ ವತಿಯಿಂದ ವಿದುಷಿ ಪ್ರತಿಭಾ ಎಲ್. ಸಾಮಗ ದಂಪತಿಯನ್ನು ಸನ್ಮಾನಿಸಲಾಯಿತು. ಹರಿಪ್ರಸಾದ್ ನಿರೂಪಿಸಿದರು. ಇನ್ನರ್ವೀಲ್ ಅಧ್ಯಕ್ಷೆ ರಾಧಿಕ ಲಕ್ಷ್ಮೀನಾರಾಯಣ್ ವಂದಿಸಿದರು.
ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ
ರು. 25 ಲಕ್ಷ ಕೋರಿಕೆ: ಸೊರಕೆ
ಪಡುಬಿದ್ರಿ: ಹೆಜಮಾಡಿ ಬಸ್ತಿಪಡ್ಪು ರಾಜೀವ ಗಾಂಧಿ ಕ್ರೀಡಾಂಗಣ ಅಭಿವೃದ್ಧಿಗೆ ರು. 25 ಲಕ್ಷ ಅನುದಾನ ಒದಗಿಸಲು ಕ್ರೀಡಾ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಹೆಜಮಾಡಿ ಸರ್ಕಾರಿ ಪ.ಪೂ ಕಾಲೇಜು ಆಶ್ರಯದಲ್ಲಿ ಇತ್ತೀಚೆಗೆ ಉಡುಪಿ ತಾಲೂಕು ದಕ್ಷಿಣ ವಲಯ ಪ.ಪೂ. ಕಾಲೇಜು ವಿದ್ಯಾರ್ಥಿಗಳ ಫುಟ್ಬಾಲ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭ ಅವರು ಕಾಲೇಜಿನ ರು. 7 ಲಕ್ಷ ವೆಚ್ಚದ ಕಟ್ಟಡ ಮತ್ತು 3.61 ಲಕ್ಷ ವೆಚ್ಚದ ಅಕ್ಷರ ದಾಸೋಹ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು. ನಂತರ ಹೆಜಮಾಡಿ ಕೋಡಿ ಶಾಲೆಗೆ ರು. 3.61 ಲಕ್ಷ ವೆಚ್ಚದ ಅಕ್ಷರ ದಾಸೋಹ ಕಟ್ಟಡಕ್ಕೆ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಶಿಲಾನ್ಯಾಸ ನೆರವೇರಿಸಿದರು. ಹೆಜಮಾಡಿ ಗ್ರಾಪಂ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ತಾಪಂ ಸದಸ್ಯ ಸಚಿನ್ ನಾಯಕ್, ಡಿಡಿಪಿಯು ಎಸ್.ಎಸ್. ಶಿಂಧಾ, ಪಿಡಿಒ ಪ್ರತಿಭಾ ಕುಡ್ತಡ್ಕ ಇದ್ದರು.
ಸಂಧ್ಯಾ-ರವಿರಾಜ್ ಸುಮಧುರ ಜೋಡಿ
ಉಡುಪಿ: ಇಲ್ಲಿನ ರೋಟರಿ ಮಲ್ಪೆ ಕೊಡವೂರು ಮಲ್ಪೆಯ ಏಳೂರು ಮೊಗವೀರ ಭವನದಲ್ಲಿ ಆಯೋಜಿಸಲಾಗಿದ್ದ ಸುಮಧುರ ಜೋಡಿ ಕಾರ್ಯಕ್ರಮದಲ್ಲಿ ಸಂಧ್ಯಾ-ರವಿರಾಜ್ ಕಿದಿಯೂರ್ ಪ್ರಥಮ ಬಹುಮಾನ ಗಳಿಸಿದ್ದಾರೆ. ಜ್ಞಾನೇಶ್ವರಿ-ಶ್ರೀದೇವ್ ಕಲ್ಕೂರ್ ದ್ವಿತೀಯ, ಚಿತ್ರ-ಹರಿಪ್ರಸಾದ್ ತೃತೀಯ ಬಹುಮಾನ ಪಡೆದಿದ್ದಾರೆ. ಸಮಾಧಾನಕಾರ ಬಹುಮಾನಗಳು: ವೀಣಾ -ಬಿ.ಎಂ. ಭಟ್, ಕೃಷ್ಣಪ್ರಿಯ-ದಿನೇಶ್ ಬೀಡು, ಪ್ರಫುಲ್ಲಾ ಶೆಟ್ಟಿಗಾರ್-ಬಿ.ಎಸ್.ಶೆಟ್ಟಿಗಾರ್. ಬಾಸುಮ ಕೊಡಗು, ವಿದ್ಯಾ ಶ್ಯಾಮಸುಂದರ್ ಹಾಗೂ ರವಿರಾಜ್ ಪಿ.ಎಚ್.ತೀರ್ಪುಗಾರರಾಗಿದ್ದರು. ರೋಟರಿ ವಲಯ 2ರ ಸಹಾಯಕ ಗವರ್ನರ್ ಮಹೇಶ್ ಕುಮಾರ್, ಸುಮಾ ಮಹೇಶ್, ವಲಯ ಸೇನಾನಿ ಪ್ರಕಾಶ್ ಶೆಟ್ಟಿ, ಭಾಗ್ಯಜ್ಯೋತಿ ಪ್ರಕಾಶ್ ಶೆಟ್ಟಿ, ರೋಟರಿ ಅಧ್ಯಕ್ಷೆ ಪೂರ್ಣಿಮಾ ಜನಾರ್ದನ್, ಕಾರ್ಯದರ್ಶಿ ಜನಾರ್ದನ್ ಕೊಡವೂರು ಬಹುಮಾನ ಪ್ರದಾನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

