ಉಡುಪಿ

'ಚಿರವಿರಹಿ' ವಿಶಿಷ್ಟ ಕೃತಿ: ಸುಬ್ರಾಯ

Published On :

ಕಾಂತಾವರ:  ದಾಂಪತ್ಯ ಕೃತಕತೆಯ ಚೌಕಟ್ಟಿನಿಂದ ಸಹಜ ಪ್ರೀತಿಯೆಡೆಗೆ ಸಾಗುವ ಪ್ರೀತಿಯ ಮಹಾಪ್ರಯಾಣದ ರೂಪಕ ಹೊಂದಿರುವ ವಿಭಿನ್ನ ಕಥಾಶೈಲಿಯ ವಿಶಿಷ್ಟ ಕೃತಿಯೇ ಬೆಳ್ಳೆ ರಾಮಚಂದ್ರ ರಾಯರ 'ಚಿರವಿರಹಿ' ಕಾದಂಬರಿ ಎಂದು ವಿಮರ್ಶಕ ಸುಬ್ರಾಯ ಚೊಕ್ಕಾಡಿ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ, ಕಾಂತಾವರ ಕನ್ನಡ ಸಂಘದ 'ನಮ್ಮ ಕನ್ನಡ ನಮ್ಮದು' ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಅವರು ಬೆಳ್ಳೆ ರಾಮಚಂದ್ರರಾಯರ 'ಚಿರವಿರಹಿ' ಕಾದಂಬರಿ ಕುರಿತು ಮಾತನಾಡಿದರು. ಶಿವರಾಮ ಕಾರಂತ, ಕುವೆಂಪು, ಅನಕೃ, ತ.ರಾ.ಸು., ಕಟ್ಟೀಮನಿ ಮುಂತಾದ ಕಾದಂಬರಿಕಾರರ ಪ್ರಭಾವವಾಗಲೀ, ನವೋದಯ ಕಾಲಘಟ್ಟದಲ್ಲಿದ್ದ ಪ್ರಗತಿಶೀಲ ಚಿಂತನೆಗಳಾಗಲಿ ಇವರ ಮೇಲೆ ಪ್ರಭಾವ ಬೀರದೆ ಭಿನ್ನವಾಗಿ ತಮ್ಮದೇ ಆದ ಬೌದ್ಧಿಕ, ಭಾವನಾತ್ಮಕ ಮತ್ತು ಪ್ರಗತಿಶೀಲ ದೃಷ್ಟಿಕೋನಗಳಿಂದ ಕೂಡಿದ ಕಾದಂಬರಿ 'ಚಿರವಿರಹಿ'ಎಂದರು. ಸಾಹಿತಿ ಡಾ.ನಾ. ಮೊಗಸಾಲೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.