ಉಡುಪಿ

ಚೆಂಬು: ಅಡಕೆ, ತೆಂಗು ಬೆಳೆಗಾರರ ಸಭೆ

Published On :

ಸುಳ್ಯ: ಅಡಕೆ ಹಾಗೂ ತೆಂಗು ಬೆಳೆಗಾರರ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಇದರ ಸಹಯೋಗದಲ್ಲಿ ಕೊಡಗು ಜಿಲ್ಲೆ ಚೆಂಬು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಬೆಳೆಗಾರರ ಸಭೆ  ನಡೆಯಿತು.
ದ.ಕ. ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಕೇರಳ ಅಡಕೆ ಬೆಳೆಗಾರರ ಸಂಘಟನೆಗಳ ಒಕ್ಕೂಟದ ಪ್ರಧಾನ ಸಂಚಾಲಕ ರವಿಕಿರಣ್ ಪುಣಚ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಜಿಲ್ಲಾ ಘಟಕ ಕಾರ್ಯದರ್ಶಿ ಅಶೋಕ ಕುಮಾರ್ ರೈ, ಸಂಪಾಜೆ ಘಟಕದ ಅಧ್ಯಕ್ಷ ಆನಂದ ಗೌಡ, ಬಿ. ರಘುನಾಥ, ಗಿರೀಶ್ ಚೆಂಡ್ಕ, ಎನ್.ಸಿ. ಮನೋಹರ, ಜಿ.ವಿ. ಗಣಪಯ್ಯ, ಗಿರೀಶ್ ಚೆಂಡ್ಕ, ಎನ್.ಸಿ. ಅನಂತ,  ಕೆ.ಡಿ. ಯತೀಶ್, ಕೆ.ಎಸ್. ಮನೋಜ್, ದಿನೇಶ್ ಸಣ್ಣಮನೆ, ಆದಮ್ ಕುಂಞ, ವಿಜಯ ಪೊಲ್ಮಾರ್ ಇದ್ದರು.
ನಿರ್ಣಯಗಳು: ಅ. 1ರಂದು ನಡೆಯುವ ಬೆಳೆಗಾರರ ರಾಜ್ಯ ಮಟ್ಟದ ಹೋರಾಟ ಬೆಂಗಳೂರು ಚಲೋ  ರ್ಯಾಲಿಯಲ್ಲಿ ಈ ಭಾಗದ 250ಕ್ಕೂ ಮಿಕ್ಕಿದ ರೈತರು ಭಾಗವಹಿಸುವುದು ಎಂದು ನಿರ್ಣಯ ಕೈಗೊಳ್ಳಲಾಯಿತು. ವಿಶೇಷವಾಗಿ ಅಡಕೆ ಬೆಳೆಯಿಂದ ಪರ್ಯಾಯ ಬೆಳೆಗೆ ಹೋಗುವ ಬೆಳೆಗಾರರಿಗೆ ಪುನರ್‌ವಸತಿ ಪ್ಯಾಕೇಜ್ ಕೇಳುವ ಬಗ್ಗೆ ಒತ್ತಾಯ ಮಾಡಲಾಯಿತು. ಕೇಂದ್ರ ಕೃಷಿ ಸಚಿವರು ಸಂಸದ ಜಯಪ್ರಕಾಶ್ ಹೆಗ್ಡೆಯವರ ನೇತೃತ್ವದಲ್ಲಿ ನಿಯೋಗಕ್ಕೆ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರವು ಅಡಕೆ ಬೆಳೆಗಾರರ ಎಲೆ ಹಳದಿ ರೋಗ ಬೆಳೆಗಾರರ ಸಂಪೂರ್ಣ ಸಾಲದ ಬಗ್ಗೆ ಪೂರ್ಣ ವರದಿಯನ್ನು ತಕ್ಷಣ ಕೇಂದ್ರ ಸರ್ಕಾರಕ್ಕೆ ತಲುಪಿಸಬೇಕು ಎಂದು ಒತ್ತಾಯ ಮಾಡಲಾಯಿತು.
ಆನೆ ಹಾವಳಿ ಜಾಸ್ತಿಯಾಗಿದ್ದು ಲಕ್ಷಾಂತರ ರುಪಾಯಿಗಳ ಕೃಷಿ ನಾಶ ಹೊಂದಿದ್ದು, ಸೂಕ್ತ ಪರಿಹಾರ ಹಾಗೂ ಹಾವಳಿ ತಡೆಯಲು ಸೂಕ್ತ ಕಾರ್ಯಾಚರಣೆ ನಡೆಸಲು ಸರ್ಕಾರಕ್ಕೆ ಒತ್ತಾಯ ಮಾಡಲು ತೀರ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.