ಮಡಿಕೇರಿ: 'ರುದ್ರತಾಂಡವ' ಚಿತ್ರೀಕರಣ
ಮಡಿಕೇರಿ: ನಗರದಲ್ಲಿ ರುದ್ರತಾಂಡವವಾಗುತ್ತಿದೆ... ಹೌದು. ವರುಣನ ಆರ್ಭಟ ಎರಡನೇ ದಿನವೂ ಮಡಿಕೇರಿಯಲ್ಲಿ ಕಂಡು ಬಂದಿದೆ. ಇದರ ಜೊತೆಗೆ 'ರುದ್ರತಾಂಡವ' ಎಂಬ ಸಿನಿಮಾ ಕೂಡ ಮಂಜಿನ ಮಡಿಲಲ್ಲಿ ಚಿತ್ರೀಕರಣಗೊಳ್ಳುತ್ತಿದೆ.
ಮಡಿಕೇರಿಯ ಸುದರ್ಶನ ವೃತ್ತದ ಬಳಿಯಿರುವ ನಗರಸಭಾ ಸದಸ್ಯ ಎಚ್.ಎಂ. ನಂದಕುಮಾರ್ ಮನೆಯಲ್ಲಿ ರುದ್ರತಾಂಡವ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
ಮಡಿಕೇರಿಯ ಮಂಜು ಮತ್ತು ಮಳೆಯ ನಡುವೆ ಚಿತ್ರೀಕರಣ ನಡೆಯುತ್ತಿದ್ದು, ನಾಯಕ ನಟ ಚಿರಂಜೀವಿ ಸರ್ಜಾ ಹಾಗೂ ಖಳನಾಯಕ ರವಿಶಂಕರ್ ಅಭಿನಯದ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.
ಗುರು ದೇಶಪಾಂಡೆ ನಿರ್ದೇಶನದ ರುದ್ರತಾಂಡವದಲ್ಲಿ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ಹಾಗೂ ಪೋಷಕ ನಟರಾಗಿ ಗಿರೀಶ್ ಕಾರ್ನಾಡ್ ಅಭಿನಯಿಸುತ್ತಿದ್ದಾರೆ. ನಂದಕುಮಾರ್ ಮನೆಯಲ್ಲಿ ಕಳೆದ ತಿಂಗಳು ರವಿಚಂದ್ರನ್ ನಾಯಕರಾಗಿದ್ದ 'ದೃಶ್ಯ' ಕನ್ನಡ ಚಿತ್ರವೂ ಚಿತ್ರೀಕರಿಸಲ್ಪಟ್ಟಿತ್ತು.
ಶ್ವಾನ ಲಸಿಕೆ 13ರಂದು
ಮಡಿಕೇರಿ: ಕೊಡಗು ಜಿ.ಪಂ., ಪಶುಪಾಲನಾ ಇಲಾಖೆ, ಸಂಪಾಜೆ ಮತ್ತು ಚೆಂಬು ಗ್ರಾ.ಪಂ., ಸಂಪಾಜೆ ಪ್ರಾ.ಆ. ಕೇಂದ್ರ, ಸುಳ್ಯ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ, ಸಂಪಾಜೆ- ಕೊಡಗು ಪಯಸ್ವಿನಿ ಪ್ರಾ.ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಆದರ್ಶ ಫ್ರೆಂಡ್ಸ್ ಚಡಾವು- ಸಂಪಾಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ತ್ರೀಶಕ್ತಿ- ಸ್ವಸಹಾಯ ಸಂಘಗಳ ಒಕ್ಕೂಟ, ಸಂಪಾಜೆ ಲಯನ್ಸ್ ಕ್ಲಬ್ ಮತ್ತು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಇವರ ಜಂಟಿ ಆಶ್ರಯದಲ್ಲಿ ಆ.13ರಂದು ಬೆಳಗ್ಗೆ 9.30 ಗಂಟೆಗೆ ಚೆಂಬು ಗ್ರಾಪಂ ಸಭಾಭವನದಲ್ಲಿ ಶ್ವಾನ ಲಸಿಕಾ(ಚುಚ್ಚುಮದ್ದು) ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಚೆಂಬು ಗ್ರಾಪಂ ಅಧ್ಯಕ್ಷೆ ತಾರಾವತಿ ಲೋಕನಾಥ್, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಎಸ್. ಸದಾನಂದ ನಾಯಕ್, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅಂಬೆಕಲ್ ವಿನೋದ್ ಮತ್ತಿತರರು ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

