ಉರುಳಿಗೆ ಸಿಲುಕಿ ಚಿರತೆ ಸಾವು
ಉಡುಪಿ: ಇಲ್ಲಿನ ಕುದಿಗ್ರಾಮ ಎಂಬಲ್ಲಿ ಬುಧವಾರ ಚಿರತೆ ಬೇಟೆಗಾರರ ಉರುಳಿಗೆ ಬಲಿಯಾದ ದಾರುಣ ಘಟನೆ ನಡೆದಿದೆ. ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದು ಆರೋಪಿಸಲಾಗುತ್ತಿದೆ
ಅಪರಾಧವಾಗಿದ್ದರೂ ಇಂದಿಗೂ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಬೇಟೆಗಾರರು ಹಂದಿಗೆ ಲೋಹದ ತಂತಿಯ ಉರುಳು ಹಾಕಿ ಹಂದಿಗಳನ್ನು ಕೊಲ್ಲುವುದು ನಡೆಯುತ್ತಲೇ ಇದೆ. ಕಳೆದ ಕೆಲವು ದಿನಗಳಿಂದ ಈ ಚಿರತೆ ಈ ಪರಿಸರದಲ್ಲಿ ಓಡಾಡುತ್ತಿತ್ತು. ಬುಧವಾರ ದುರಾದೃಷ್ಟವಶಾತ್ ಹಂದಿಗೆ ಇಟ್ಟಿದ್ದ ತಂತಿಯ ಉರುಳಿನಲ್ಲಿ ಚಿರತೆ ಸಿಕ್ಕಿ ಹಾಕಿಕೊಂಡಿದೆ.
ಆದರೆ ಈ ಉರುಳು ಸೊಂಟಕ್ಕೆ ಬಿದ್ದಿದ್ದು, ಒಂದು ವೇಳೆ ಕುತ್ತಿಗೆಗೆ ಬಿದ್ದಿದ್ದರೇ ತಕ್ಷಣ ಉಸಿರುಗಟ್ಟಿ ಸತ್ತು ಹೋಗುತ್ತಿತ್ತು. ಆದರೆ ಚಿರತೆ ಹೆದರಿ ಬಿಡಿಸಿಕೊಳ್ಳುವ ಭರದಲ್ಲಿ ಎಳೆದಂತೆಲ್ಲಾ ಉರುಳು ಸೊಂಟಕ್ಕೆ ಬಿಗಿದಿದೆ. ನೋವಿನಿಂದ ಚಿರಾಡುತ್ತಿದ್ದ ಚಿರತೆಯನ್ನು ನೋಡಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸುಮಾರು 6 ವರ್ಷ ಪ್ರಾಯದ ಭರ್ಜರಿ ದೇಹದ ಈ ಗಂಡು ಚಿರತೆಯನ್ನು ಉರುಳಿನಿಂದ ಬಿಡಿಸಬೇಕಾಗಿದ್ದರೆ ಮೊದಲು ಅದರ ಪ್ರಜ್ಞೆ ತಪ್ಪಿಸಬೇಕಾಗಿತ್ತು. ಆದರೆ ಅಚ್ಚರಿ ಎಂದರೆ, ಉಡುಪಿ ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಪ್ರಾಣಿಗಳಿಗೆ ದೂರದಿಂದ ಬಂದೂಕಿನಿಂದ ಅರಿವಳಿಕೆಯ ಚುಚ್ಚು ಮದ್ದು ಹಾರಿಸುವ ತಜ್ಞರೇ ಇಲ್ಲ
ಮಂಗಳೂರಿನಿಂದ ತಜ್ಞರು ಬರುವಷ್ಟರಲ್ಲಿ ಚಿರತೆಯ ಸೊಂಟಕ್ಕೆ ಸಿಲುಕಿದ್ದ ಉರುಳು ಬಿಗಿದು ನೋವಿನಿಂದ ನರಳಿ ನರಳಿ ಚಿರತೆ ಕೊನೆಯುಸಿರೆಳೆದಿದೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಶವ ಮಹಜರು ನಡೆಸಿ ವಶಕ್ಕೆ ಪಡೆದುಕೊಂಡು ಇಲಾಖೆಯ ನಿಮಯಗಳಂತೆ ಅಂತ್ಯಸಂಸ್ಕಾರ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

